ಮನೆಯಲ್ಲಿದ್ದ ಹಣವನ್ನು ಹಿಡಿದು ಯುವಕನೊಂದಿಗೆ ಅಪ್ರಾಪ್ತ ಬಾಲಕಿ ಎಸ್ಕೇಪ್!! ಮದುವೆಯ ಆಮಿಷ,ಹಣ ಕದಿಯಲು ಪ್ರೇರಣೆ-ಯುವಕನಿಗೆ ಕೇಸ್ ಜಡಿದ ಪೋಷಕರು

Share the Article

ಯುವಕನೋರ್ವ ಮದುವೆಯ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿಯನ್ನು ಮನೆಯಿಂದ ಹಣ ತರುವಂತೆ ತಿಳಿಸಿ ಆಕೆಯೊಂದಿಗೆ ಪರಾರಿಯಾದ ಘಟನೆಯೊಂದು ಛತ್ತೀಸ್ ಗಢದಲ್ಲಿ ಬೆಳಕಿಗೆ ಬಂದಿದ್ದು, ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ.

ಘಟನೆ ವಿವರ:ಬಾಲಕಿಯ ಪೋಷಕರು ಫ್ಲಾಟ್ ಒಂದನ್ನು ಮಾರಿದ ಹಣವನ್ನು ಮನೆಯಲ್ಲಿರಿಸಿದ್ದು, ಹಣ ನೋಡಿದ ಯುವತಿ ಯುವಕನಿಗೆ ತಿಳಿಸಿದ್ದಾಳೆ.ಆತ ಮದುವೆಯ ಆಮಿಷವೊಡ್ಡಿ ಬಾಲಕಿಯನ್ನು ಹಣ ತರುವಂತೆ ಒತ್ತಾಯಿಸಿದ್ದು, ಈತನ ಮಾತು ನಂಬಿದ ಬಾಲಕಿ ಹಣ ಪಡೆದುಕೊಂಡು ಮನೆಯಿಂದ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.

ವಿಷಯ ಗಮನಕ್ಕೆ ಬರುತ್ತಿದ್ದಂತೆ ಪೋಷಕರು ಎಲ್ಲಾ ಕಡೆ ವಿಚಾರಿಸಿದ್ದು, ಆಕೆಯ ಸ್ನೇಹಿತೆಯರಿಂದ ಓಡಿ ಹೋಗಿರುವ ವಿಚಾರ ತಿಳಿದುಬಂದಿದ್ದು ಉಪಾಯವಿಲ್ಲದೆ ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಪೊಲೀಸರು ಯುವಕ ಹಾಗೂ ಬಾಲಕಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply