Home News ಹಿಮದ ನಡುವೆ ಬಾರ್ಡರ್ ನಲ್ಲಿ ಯೋಧರ ಭರ್ಜರಿ ಕಬಡ್ಡಿ !! | ಬಿಡುವಿನಲ್ಲಿ ಕಬಡ್ಡಿ ಆಡುತ್ತಾ...

ಹಿಮದ ನಡುವೆ ಬಾರ್ಡರ್ ನಲ್ಲಿ ಯೋಧರ ಭರ್ಜರಿ ಕಬಡ್ಡಿ !! | ಬಿಡುವಿನಲ್ಲಿ ಕಬಡ್ಡಿ ಆಡುತ್ತಾ ಎಂಜಾಯ್ ಮಾಡುತ್ತಿರುವ ಯೋಧರ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಚಳಿ, ಮಳೆ, ಬಿಸಿಲು ಯಾವುದನ್ನೂ ಲೆಕ್ಕಿಸದೇ ದೇಶಕ್ಕಾಗಿ ಸೇವೆ ಸಲ್ಲಿಸುವ ಏಕೈಕ ಶಕ್ತಿಯೆಂದರೆ ಅದು ನಮ್ಮ ಸೈನಿಕರು. ಸೈನಿಕರಿಗೆ ನಾವು ಎಷ್ಟು ಗೌರವ ಸಲ್ಲಿಸಿದರೂ ಸಾಲದು. ಇಂತಹ ಭಾರತದ ಹೆಮ್ಮೆಯ ಪುತ್ರರು ಇಂಡೋ-ಟಿಬೆಟಿಯನ್ ಗಡಿಯಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಕಬಡ್ಡಿ ಆಡಿರುವ ವೀಡಿಯೋ‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

52 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ದೇಶ ಕಾಯುವ ಯೋಧರು ದಪ್ಪ ಉಣ್ಣೆಯ ಬಟ್ಟೆಯನ್ನು ಧರಿಸಿ ಹಿಮಾಚಲ ಪ್ರದೇಶದ ಹಿಮಾಲಯ ಪರ್ವತಗಳಲ್ಲಿ ಕಬಡ್ಡಿ ಆಡುತ್ತಾ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಈ ವೀಡಿಯೋವನ್ನು ಐಟಿಬಿಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ಬಹಳ ಹುಮ್ಮಸ್ಸಿನಿಂದ ಹಿಮದ ಮಧ್ಯೆ ಆಟ ಆಡುತ್ತಿದ್ದಾರೆ (ಫುಲ್ ಆಫ್ ಜೋಶ್, ಪ್ಲೇಯಿಂಗ್ ಇನ್ ಸ್ನೋ) ಎಂದು ಬರೆದುಕೊಂಡಿದೆ. ಒಟ್ಟಾರೆ ಈ ವೀಡಿಯೋವನ್ನು ಇಲ್ಲಿಯವರೆಗೂ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ಈ ಮುನ್ನ ಐಟಿಬಿಪಿ ತನ್ನ ಸಿಬ್ಬಂದಿ ಹಿಮದಿಂದ ಆವೃತವಾದ ಪ್ರದೇಶದಲ್ಲಿ ತಿರುಗುತ್ತಿರುವ ಮತ್ತು ಹಗ್ಗಗಳ ಸಹಾಯದಿಂದ ಒಬ್ಬರ ಹಿಂದೆ ಮತ್ತೊಬ್ಬರು ಹಿಂಬಾಲಿಸುತ್ತಿರುವ ಮತ್ತೊಂದು ವೀಡಿಯೊವನ್ನು ಅಪ್‍ಲೋಡ್ ಮಾಡಿತ್ತು. ವೀಡಿಯೋದಲ್ಲಿ ಐಟಿಬಿಪಿ ಸಿಬ್ಬಂದಿ ಹೆಗಲ ಮೇಲೆ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಕೈಯಲ್ಲಿ ಕೋಲು ಹಿಡಿದು ಮುಂದೆ ಸಾಗುತ್ತಿರುವುದು ಕಾಣಬಹುದಾಗಿದೆ.