NEET UG ಪರೀಕ್ಷೆ ಬರೆಯಲು ಗರಿಷ್ಠ ವಯೋಮಿತಿ ತೆಗೆದ ಎನ್ ಎಂಸಿ| ಅಧಿಕೃತ ನೋಟಿಸ್ ಬಿಡುಗಡೆ
ಅಂಡರ್ ಗ್ರಾಜ್ಯುಯೇಟ್ ಮೆಡಿಕಲ್ ಎಜುಕೇಶನ್ ಬೋರ್ಡ್ – ರಾಷ್ಟ್ರೀಯ ವೈದ್ಯಕೀಯ ಆಯೋಗವು, ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್ ( NEET -UG) ಗೆ ಈವರೆಗೆ ನಿಗದಿಪಡಿಸಲಾಗಿದ್ದ ಗರಿಷ್ಠ ವಯೋಮಿತಿ ನಿರ್ಬಂಧವನ್ನು ತೆಗೆದಿದೆ. ಇನ್ನು ಮುಂದೆ ನೀಟ್ ಯುಜಿ ಪರೀಕ್ಷೆ ತೆಗೆದುಕೊಳ್ಳಲು ಎಷ್ಟೇ ವಯಸ್ಸಾದವರು ಅರ್ಹರು.
ಈ ಹಿಂದೆ ನೀಟ್ ಯುಜಿ ಪರೀಕ್ಷೆ ತೆಗೆದುಕೊಳ್ಳಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ, ಮೀಸಲಾತಿ ಕೋರುವ ಅಭ್ಯರ್ಥಿಗಳಿಗೆ ( ಇತರೆ ವರ್ಗದ ಅಭ್ಯರ್ಥಿಗಳಿಗೆ) ಗರಿಷ್ಠ 30 ವರ್ಷ, ವಯೋಮಿತಿ ನಿಗದಿಪಡಿಸಲಾಗಿತ್ತು. ಈ ವಯಸ್ಸಿನ ನಿರ್ಬಂಧ ಇನ್ನು ಮುಂದೆ ಇರೋದಿಲ್ಲ. ಇದರ ಪ್ರಕಾರ ಯಾವುದೇ ಮೆಡಿಕಲ್ ಕೋರ್ಸ್ ಗೆ ಅಡ್ಮಿಷನ್ ಪಡೆದಿದ್ದರೂ ಸಹ ಎಷ್ಟು ಬಾರಿ ಬೇಕಾದರೂ ನೀಟ್ ಯುಜಿ ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ಎನ್ ಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.