ಸದ್ಯದಲ್ಲೇ ಭಾರತದಿಂದ ಗಡಿಪಾರು ಆಗಲಿದ್ದಾರೆ ವಿವಾದಾತ್ಮಕ ನಟ ಚೇತನ್!! ರಾಜ್ಯ ಗೃಹ ಕಚೇರಿಗೆ ಪತ್ರ ರವಾನಿಸಿ ಶಿಫಾರಸ್ಸು ಮಾಡಿದ ಪೊಲೀಸ್ ಇಲಾಖೆ
ಕನ್ನಡ ಚಿತ್ರರಂಗದ ನಟ, ಸಾಮಾಜಿಕ ಹೋರಾಟಗಾರ ಚೇತನ್ ರನ್ನು ಅಮೇರಿಕಾ ದೇಶಕ್ಕೆ ಗಡಿಪಾರು ಮಾಡುವ ಬಗ್ಗೆ ಪೊಲೀಸ್ ಇಲಾಖೆಯು ಗೃಹ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದೆ ಎನ್ನುವ ಮಾಹಿತಿಯೊಂದು ಹರಿದಾಡುತ್ತಿದೆ.
ಸಮುದಾಯವೊಂದರ ಅವಹೇಳನ ನಡೆಸಿದ ಕೇಸ್ ನಲ್ಲಿ ಸಿಲುಕಿಕೊಂಡಿರುವ ನಟ ಚೇತನ್ ರ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಚೇತನ್ ಸಾಮಾಜಿಕ ಹೋರಾಟದ ನೆಪದಲ್ಲಿ ಸಮಾಜದಲ್ಲಿ ಅವಹೇಳನಕಾರಿ ಭಾಷಣ ಬಿಗಿದು, ಶಾಂತಿ ಕದಡುವಂತಹ ಯತ್ನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮೇರಿಕಾಗೆ ಗಡಿಪಾರು ಮಾಡುವಂತೆ ಎಡಿಜಿಪಿ ಪ್ರತಾಪ್ ರೆಡ್ಡಿ ಅವರ ಮೂಲಕ ಬಸವನಗುಡಿ ಪೊಲೀಸರು ಗೃಹ ಕಚೇರಿಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಅಮೇರಿಕಾ ಯಾಕೆ!?
ನಟ ಚೇತನ್ ಮೂಲತಃ ಮೈಸೂರಿನವರಾಗಿದ್ದು ಅಮೇರಿಕಾದಲ್ಲಿ ತನ್ನ ಕುಟುಂಬ ನೆಲೆಸಿದ್ದ ಹಿನ್ನೆಲೆಯಲ್ಲಿ ಚೇತನ್ ಅಲ್ಲೇ ಹುಟ್ಟಿ ಬೆಳೆದಿದ್ದು ಅಮೇರಿಕಾದ ಪೌರತ್ವ ಪಡೆದಿದ್ದಾರೆ. ಹಾಗಾಗಿ ಅಮೇರಿಕಾಗೆ ಗಡಿಪಾರು ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ ಎನ್ನಲಾಗುತ್ತಿದೆ. ಸದ್ಯ ಕೆಲ ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿದ್ದು ಸಿನಿಮಾ ಬಿಡುಗಡೆಗೂ ಸಿದ್ಧವಾಗಿದೆ. ಸುಮಾರು 15 ಕೋಟಿಗೂ ಮಿಕ್ಕಿ ಬಂಡವಾಳವನ್ನು ಚೇತನ್ ಮೇಲೆ ಹೂಡಿದ ನಿರ್ಮಾಪಕರ ಚಿಂತೆಗೆ ಈಡಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಚೇತನ್ ತನಗೂ ತನ್ನ ವಕೀಲರಿಗೂ ಗಡಿಪಾರು ವಿಷಯ ಗಮನಕ್ಕೆ ಬಂದಿಲ್ಲ. ನನ್ನ ಹೋರಾಟ ನಿರಂತರ ನಡೆಯಲಿದ್ದು, ಇಂತಹ ನಿರ್ಧಾರಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.