ಪೆರುವಾಯಿ ಬದ್ರಿಯಾ ಜುಮಾ ಮಸೀದಿಯ ಊರೂಸ್ ಸಮಾರಂಭದ ದಿನಾಂಕ ಪ್ರಕಟ

Share the Article

ಪುತ್ತೂರು :- ಎರಡು ವರುಷಕ್ಕೊಮ್ಮೆ ಮರ್ಹೂಂ ಸಯ್ಯದ್ ಅಬೂಬಕ್ಕರ್ ಹಾದಿ ತಂಙಳ್ ರವರ ಹೆಸರಿನಲ್ಲಿ ನಡೆಸಿಕ್ಕೊಂಡು ಬರುತ್ತಿರುವ ಬದ್ರಿಯಾ ಜುಮಾ ಮಸೀದಿ ಪೆರುವಾಯಿಯ ಊರೂಸ್ ಸಮಾರಂಭದ ಸಮಾಲೋಚನಾ ಸಭೆಯು ಜುಮಾ ನಮಾಝಿನ ಬಳಿಕ ಮಾರ್ಚ್ 4 ರಂದು ಸಯ್ಯದ್ ಹಬೀಬುಲ್ಲಾ ತಂಙಳ್ ಪೆರುವಾಯಿ ಯವರ ಅಧ್ಯಕ್ಷ ತೆಯಲ್ಲಿ ಮಸೀದಿಯಲ್ಲಿ ನಡೆಯಿತು.ಊರೂಸ್ ಸಮಾರಂಭವು ಮೇ 11 ರಂದು ಆರಂಭಗೊಂಡು ,ಊರೂಸಿನ ಸಮಾರೋಪ ಸಮಾರಂಭ ಮೇ 15 ರಂದು ನಡೆಯಲಿದೆ.ಈ ಕಾರ್ಯಕ್ರಮಗಳಲ್ಲಿ ಉಲಮಾ ಉಮರಾಕಳು ,ಪ್ರಸಿದ್ಧ ವಾಗ್ಮಿಗಳು, ಭಾಗವಹಿಸಲಿದ್ದಾರೆ. ಮಸೀದಿಯ ಖತೀಬರಾದ ಶರೀಫ್ ಮದನಿ ,ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಮಮ್ಮು ಹಾಜಿ ಪೆರುವಾಯಿ ,ಆಡಳಿತ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಜಮಾಅತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave A Reply