ಗಮನಿಸಿ : ರಾಜ್ಯದ ಜನತೆಗೆ ಈ ಬಾರಿ ತಟ್ಟಲಿದೆ ‘ ಬಿಸಿಲ ಬರೆ’| ಈ ವರ್ಷ ಬರೋಬ್ಬರಿ ‘ ನಾಲ್ಕು ತಿಂಗಳು ಬೇಸಿಗೆ’ |
ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಮುನ್ನವೇ ಬೇಸಿಗೆ ಆರಂಭವಾಗಿದ್ದು, ಹಲವು ಜಿಲ್ಲೆಗಳಲ್ಲಿ ಬಿಸಿಲ ತಾಪ ಗರಿಷ್ಠ ಮಟ್ಟಕ್ಕೆ ಏರತೊಡಗಿದೆ. ಇದರೊಂದಿಗೆ ಈ ಬಾರಿ ಹೆಚ್ಚು ಮಳೆಯ ಕಾರಣ, ಚಳಿಗಾಲದ ಅವಧಿ ಇಳಿಮುಖವಾದ ಕಾರಣ, ಈ ಬಾರಿ ಬೇಸಿಗೆಬೇಗ ಶುರುವಾಗಿದ್ದು, ನಾಲ್ಕು ತಿಂಗಳು ಬೇಸಿಗೆಯ ಬಿಸಿಲು, ರಾಜ್ಯದ ಜನತೆಯನ್ನು ತಟ್ಟಲಿದೆ.
ಅಂದಹಾಗೆ ಪ್ರತಿವರ್ಷ ಮಾರ್ಚ್ 1 ರಿಂದ ಆರಂಭವಾಗುವ ಬೇಸಿಗೆ, ಮೇ 31 ರವರೆಗೆ ಇರುತ್ತಿತ್ತು. ಆದರೆ ಈ ವರ್ಷ ಫೆಬ್ರವರಿ 2 ನೇ ವಾರವೇ ಬೇಸಿಗೆ ಆರಂಭವಾಗಿದೆ. ಅಲ್ಲದೇ ವಾಡಿಕೆಯಂತೆ ಎಪ್ರಿಲ್ 2 ನೇ ಅಥವಾ 3 ನೇ ವಾರದಲ್ಲಿ ಹೆಚ್ಚಾಗುತ್ತಿದ್ದಂತ ಉಷ್ಣಾಂಶ ಹೆಚ್ಚಳವಾಗುತ್ತಿತ್ತು. ಆದರೆ ಈ ವರ್ಷ ಮಾರ್ಚ್ 3 ನೇ ವಾರದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲೆಯಾಗಿದೆ. ಈ ತಿಂಗಳ ಮೂರನೇ ವಾರ ಅಥವಾ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ.