Home News ಉಡುಪಿಯಲ್ಲಿ ನಡೆಯಿತು ಅಪರೂಪದ ಘಟನೆ!! ನೋಡುಗರನ್ನು ರೋಮಾಂಚನಗೊಳಿಸಿದ ಯಕ್ಷಗಾನದ ಪಾತ್ರ ಯಾವುದು ಗೊತ್ತಾ!??

ಉಡುಪಿಯಲ್ಲಿ ನಡೆಯಿತು ಅಪರೂಪದ ಘಟನೆ!! ನೋಡುಗರನ್ನು ರೋಮಾಂಚನಗೊಳಿಸಿದ ಯಕ್ಷಗಾನದ ಪಾತ್ರ ಯಾವುದು ಗೊತ್ತಾ!??

Hindu neighbor gifts plot of land

Hindu neighbour gifts land to Muslim journalist

ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ ಪಡೆದ ಯಕ್ಷಗಾನ, ತುಳುನಾಡಿನ ‘ಆಟ’ ದಲ್ಲಿ ಆಧುನಿಕ ಯುಗದಲ್ಲಿ ಮಹತ್ತರ ಬದಲಾವಣೆಗಳು, ಹೊಸ ಹೊಸ ಪ್ರಯೋಗಗಳು ಕಂಡು ಬರುತ್ತಿದೆ.

ಅಂತೆಯೇ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ವಿಭಿನ್ನ ಪ್ರಯತ್ನವೊಂದು ನಡೆದಿದ್ದು ನೋಡುಗರ ಕಣ್ಮನಸೆಳೆಯುವುದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.ಹೌದು, ಯಕ್ಷಗಾನ ಪ್ರಸಂಗವೊಂದರಲ್ಲಿ ದೇವೇಂದ್ರನ ವೇಷಧಾರಿ ನೈಜ ಗಜರಾಜನನ್ನು ಏರಿ ರಂಗಸ್ಥಳದತ್ತ ಸವಾರಿ ಬಂದಿದ್ದು, ನೋಡುಗರನ್ನು ರೋಮಾಂಚನಗೊಳಿಸಿದೆ.

ಭಾಗವತರು ಹಾಡಿನ ಮೂಲಕ ದೇವೇಂದ್ರನ ಪ್ರವೇಶದ ಕಥನಕ್ಕೆ ಸೀಮಿತಗೊಳ್ಳುವ ಬದಲಿಗೆ ಇಲ್ಲಿ ನೈಜ ಆನೆಯನ್ನೇ ತರಲಾಗಿದ್ದು ವಿಶೇಷವಾಗಿತ್ತು.ಆನೆಯ ಮೇಲೆ ಬಂದಾಗ ಸಂತೋಷಗೊಂಡ ಪ್ರೇಕ್ಷಕರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಗಳನ್ನು ಸೆರೆ ಹಿಡಿದು ಅಪರೂಪದ ಘಟನೆಯನ್ನು ಎಲ್ಲೆಡೆಗೂ ಪಸರಿಸಿದ್ದಾರೆ.ತನ್ನ ಪಟ್ಟದ ಆನೆಯನ್ನು ಏರಿ ಬರುವ ದೇವೇಂದ್ರನ ಪಾತ್ರ ವಿಶೇಷ ಎನ್ನುವ ಬದಲು ಅಪರೂಪ ಎನ್ನುತ್ತಾರೆ ನೆರೆದಿದ್ದ ವೀಕ್ಷಕರು.