ರಾತ್ರೋ ರಾತ್ರಿ ಬೂಟುಗಾಲಲ್ಲಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ಅರಣ್ಯ ಅಧಿಕಾರಿ ಸಂಧ್ಯಾ ವರ್ಗಾವಣೆಗೆ ಬಿತ್ತಾ ಬ್ರೇಕ್!?? ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಯಾರ ಪಾಲಾಯಿತು ಗೆಲುವು!??
ದಕ ಜಿಲ್ಲಾ ಪ್ರಭಾರ ಹಾಗೂ ಉಡುಪಿ ಜಿಲ್ಲಾ ಅರಣ್ಯ ಸಂಚಾರ ದಳದ ಅರಣ್ಯಧಿಕಾರಿಯಾಗಿದ್ದ ಸಂಧ್ಯಾ ಸಚಿನ್ ಅವರ ವರ್ಗಾವಣೆ ರದ್ದುಗೊಳಿಸಿ ಹಿಂದಿನ ಹುದ್ದೆಯಲ್ಲೇ ಮುಂದುವರಿಯಲು ಕೋರ್ಟ್ ಆದೇಶಿಸಿದೆ. ಸಂಧ್ಯಾ ವರ್ಗಾವಣೆಯ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೈವಾಡವಿದ್ದು, ಮುಖ್ಯಮಂತ್ರಿಗೆ ಶಿಫಾರಸ್ಸು ಮಾಡಿದ್ದರು ಎಂಬ ಬಗ್ಗೆಯೂ ಸುದ್ದಿಯಾಗಿತ್ತು.
ಹರೀಶ್ ಪೂಂಜಾ ಅವರು ಮುಖ್ಯ ಮಂತ್ರಿ ಬೊಮ್ಮಾಯಿ ಅವರಿಗೆ ಬರೆದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ, ಅಧಿಕಾರಿ ಸಂಧ್ಯಾ ಬಿಲ್ಲವ ಸಮಾಜವನ್ನು ತನ್ನ ರಕ್ಷಣೆಗೆ ಸಹಕರಿಸುವಂತೆ ಕೊರಿಕೊಂಡಿದ್ದರು. ಇಲ್ಲಿ ಜಾತಿ ರಾಜಕಾರಣ ಅಗತ್ಯ ಇತ್ತಾ!? ಒಬ್ಬ ಅಧಿಕಾರಿ ತನಗೆ ಸಮಸ್ಯೆ ಇದ್ದಾಗ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕೆ ಹೊರತು ಸಂಘ ಸಂಸ್ಥೆಗಳ ಮುಖಾಂತರ ರಾಜಕಾರಣ ನಡೆಸುವುದೆಷ್ಟು ಸರಿ ಎನ್ನುವುದು ಪೂಂಜಾ ಪರ ನಿಂತ ಕೆಲವರ ವಾದವಾಗಿತ್ತು.
ಮೊದಲಿಗೆ ತನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದ ಶಾಸಕರು ಮಾತ್ರ ಆ ಬಳಿಕ ಸುಮ್ಮನಾಗಿದ್ದರು ಎನ್ನುವ ಗಾಳಿಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದ್ದ ಬೆನ್ನಲ್ಲೇ ಸಂಧ್ಯಾ ವರ್ಗಾವಣೆ ಅಧಿಕೃತವಾಗಿ ಘೋಷಣೆಯಾಗಿತ್ತು. ಅಂತೂ ಸಂಧ್ಯಾ ಬೀದರ್ ಸೇರುವ ಸಮಯ ಸನ್ನಿಹಿತವಾದ ಕೂಡಲೇ,ಕೋರ್ಟ್ ಮೆಟ್ಟಿಲೇರಿದ್ದು ಸದ್ಯ ಸಂಧ್ಯಾ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ.
ಈ ಮೊದಲು ಸಂಧ್ಯಾ ಕಡಬ ತಾಲೂಕಿನ ಪ್ರಸಾದ್ ಎಂಬವರ ಮನೆಯೊಂದಕ್ಕೆ ರಾತ್ರೋ ರಾತ್ರಿ ಬೂಟುಗಾಲಲ್ಲಿ ನುಗ್ಗಿ ದಾಂಧಲೆ ನಡೆಸಿ ರಾಜ್ಯವ್ಯಾಪಿ ಸುದ್ದಿಯಾಗಿತ್ತು.ಅದಲ್ಲದೇ ಪ್ರಕರಣ ಕಾರ್ಣಿಕ ಕ್ಷೇತ್ರ ಮಜ್ಜಾರು ದೈವದ ಮೊರೆ ಹೋಗುವ ತನಕ ಮುಂದುವರಿದಿದ್ದು ಇದರಲ್ಲಿ ಸಂಧ್ಯಾ ಅನ್ಯಾಯ ಎಸಗಿದ್ದಾರೆ ಎಂದು ಸಾಬೀತಾಗುತ್ತಲೇ ಆಕೆ ಹಾಗೂ ಇತರ ಕೆಲವರ ಮೇಲೆ ಮೊದಲು ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಕಡಬ ಪೊಲೀಸರು ಕೋರ್ಟ್ ಆದೇಶದ ಬಳಿಕ ಎಫ್.ಐ.ಆರ್ ದಾಖಲಿಸಿಕೊಂಡಿದ್ದರು.
ಕಳೆದ ಕೆಲ ವರ್ಷಗಳಿಂದ ಸಂಧ್ಯಾ ಎನ್ನುವ ಅಧಿಕಾರಿಯೊಬ್ಬರ ಹೆಸರು ರಾಜ್ಯಾಂದ್ಯತ ಭಾರೀ ಸದ್ದು ಮಾಡುತ್ತಿದೆ. ಅಧಿಕಾರದ ಮದದಲ್ಲಿ ಗೂಂಡಾ ವರ್ತನೆ ತೋರುವ ಇಂತಹ ಅಧಿಕಾರಿಗಳಿಂದಗಿಯೇ ಇಲಾಖೆಗೂ ಕೆಟ್ಟ ಹೆಸರು ಬರುತ್ತಿದೆ, ಜನರಿಗೆ ಇಲಾಖೆಯ ಮೇಲಿದ್ದ ನಂಬಿಕೆಯ ಗೋಡೆ ಕಳಚಿ ಬೀಳುತ್ತಿದೆ ಎನ್ನುವುದು ನೆಟ್ಟಿಗರ ಮಾತಾಗಿದೆ.