Home Interesting ಬಾತುಕೋಳಿ ಜೊತೆ ಸಮರಕ್ಕೆ ನಿಂತ ನಾಯಿ !! |ನೀರಿನಲ್ಲಿ ವಿಹರಿಸುತ್ತಿದ್ದ ಬಾತುಕೋಳಿಯನ್ನು ಛೇಡಿಸಿದ ನಾಯಿ ಮರಿಯನ್ನು...

ಬಾತುಕೋಳಿ ಜೊತೆ ಸಮರಕ್ಕೆ ನಿಂತ ನಾಯಿ !! |ನೀರಿನಲ್ಲಿ ವಿಹರಿಸುತ್ತಿದ್ದ ಬಾತುಕೋಳಿಯನ್ನು ಛೇಡಿಸಿದ ನಾಯಿ ಮರಿಯನ್ನು ಕೊಕ್ಕಿನಿಂದ ನೀರಿಗೆ ಬಡಿದ ಈ ತಮಾಷೆಯ ದೃಶ್ಯ ವೈರಲ್

Hindu neighbor gifts plot of land

Hindu neighbour gifts land to Muslim journalist

ಈಗಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸದವರೇ ಇಲ್ಲ, ಅಥವಾ ಬಳಸದವರ ಸಂಖ್ಯೆ ಅತಿ ವಿರಳ ಎಂದೇ ಹೇಳಬಹುದು. ಈ ಸೋಶಿಯಲ್ ಮೀಡಿಯಾ ಎಂಬ ಪ್ರಪಂಚದಲ್ಲಿ ಪ್ರತಿನಿತ್ಯ ಹಲವು ವೈವಿದ್ಯಮಯ ವೀಡಿಯೋಗಳು ಕಂಡುಬರುತ್ತವೆ. ಅವುಗಳಲ್ಲಿ ನೆಟ್ಟಿಗರ ಮನಸ್ಸು ಗೆಲ್ಲುವ ವೀಡಿಯೋಗಳ ಸಂಖ್ಯೆ ಹೆಚ್ಚು ಎಂದೇ ಹೇಳಬಹುದು.

ಇದೀಗ ತಮಾಷೆಯ ವೀಡಿಯೋವೊಂದು ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಬಾತುಕೋಳಿ ಮತ್ತು ನಾಯಿಗಳ ಕಾದಾಟಕ್ಕೆ ಸಂಬಂಧಿಸಿದ ವೀಡಿಯೋ ಇದಾಗಿದ್ದು, ಈ ವೀಡಿಯೋ ನೋಡಿದರೆ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಿ. ಈ ತಮಾಷೆಯ ವೀಡಿಯೋವನ್ನು ಕೆಲವೇ ಸಮಯದಲ್ಲಿ ಸಾವಿರಾರು ಬಾರಿ ವೀಕ್ಷಿಸಲಾಗಿದೆ ಮತ್ತು ನೆಟಿಜನ್‌ಗಳು ಸಹ ಅದನ್ನು ಇಷ್ಟಪಟ್ಟಿದ್ದಾರೆ.

ಕೆಲವೇ ಸೆಕೆಂಡುಗಳ ಈ ವೈರಲ್ ವೀಡಿಯೋದಲ್ಲಿ ನಾಯಿಯೊಂದು ಕೆರೆ ಬಳಿ ಬಂದಾಗ ಬಾತುಕೋಳಿ ಅಲ್ಲಿ-ಇಲ್ಲಿ ನೋಡುತ್ತಾ ಆರಾಮವಾಗಿ ವಿಹರಿಸುತ್ತಿರುವುದು ಕಂಡು ಬರುತ್ತದೆ. ಇದನ್ನು ಕಂಡ ನಾಯಿ ಬೊಗಳುತ್ತಾ ಬಾತುಕೋಳಿಯನ್ನು ಛೇಡಿಸುತ್ತದೆ. ನೀರಿನಲ್ಲಿ ತೇಲುತ್ತಾ ಇದ್ದ ಬಾತುಕೋಳಿ ತಕ್ಷಣವೇ ದಡಕ್ಕೆ ಬಂದು ಕೊಕ್ಕಿನಿಂದ ನಾಯಿಮರಿಯನ್ನು ಹಿಡಿದು ನೀರಿಗೆ ಬಡಿದಿರುವುದನ್ನು ತಮಾಷೆಯ ವೀಡಿಯೋದಲ್ಲಿ ನೀವು ಕಾಣಬಹುದು.

https://www.instagram.com/reel/Cap2anyFCj0/?utm_source=ig_web_copy_link

ಫ್ರೇಮ್‌ನಲ್ಲಿ ಈ ದೃಶ್ಯವನ್ನು ನೋಡುವುದು ತುಂಬಾ ತಮಾಷೆಯಾಗಿ ಕಾಣುತ್ತದೆ. ನಾಯಿಯು ನಿರಂತರವಾಗಿ ಬೊಗಳುವುದನ್ನು ನೋಡಬಹುದು. ಇದಕ್ಕೆ ಪ್ರತಿಕ್ರಿಯೆಯಾಗಿ ಬಾತುಕೋಳಿಯು ಕ್ಷಣಮಾತ್ರದಲ್ಲಿ ನಾಯಿಮರಿಯನ್ನು ಹತ್ತಿಕ್ಕಿ ಅದನ್ನು ನೀರಿನಲ್ಲಿ ಬಡಿಯುತ್ತದೆ. ಬಾತುಕೋಳಿ ಕೊಕ್ಕನ್ನು ಸಡಿಲಿಸುತ್ತಿದ್ದಂತೆ ಮತ್ತೆ ನಾಯಿ ಎದ್ದನೋ, ಬಿದ್ದನೋ ಎಂದು ದಡದ ಮೇಲೇರುತ್ತದೆ.

ಈ ವೀಡಿಯೋ ಯಾವಾಗ, ಎಲ್ಲಿ ನಡೆದಿತ್ತು ಎಂಬ ಬಗ್ಗೆ ಮಾಹಿತಿ ಇಲ್ಲ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಭಾರೀ ವೈರಲ್ ಆಗುತ್ತಿದೆ. ನೇಚರ್27_12 ಹೆಸರಿನ ಪುಟದಲ್ಲಿ ಈ ವೈರಲ್ ವೀಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.