Home Entertainment ತನ್ನ ಕಾರು ಅಪಘಾತದ ಕುರಿತೇ ಹಾಡು ರಚಿಸಿ ಧ್ವನಿ ನೀಡಿದ ಕಚ್ಚಾ ಬಾದಾಮ್ ಗಾಯಕ ಭುವನ್...

ತನ್ನ ಕಾರು ಅಪಘಾತದ ಕುರಿತೇ ಹಾಡು ರಚಿಸಿ ಧ್ವನಿ ನೀಡಿದ ಕಚ್ಚಾ ಬಾದಾಮ್ ಗಾಯಕ ಭುವನ್ !! | ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸುತ್ತಾ ವೈರಲ್ ಆಗಿರುವ ‌ಈ ಹೊಸ ಹಾಡು !!?

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನ ಮೂಡಿಸಿದ್ದ ಕಚ್ಚಾ ಬಾದಾಮ್ ಖ್ಯಾತಿಯ ಗಾಯಕ ಭುವನ್ ಬದ್ಯಕರ್ ಕಳೆದ ಸೋಮವಾರ ರಾತ್ರಿ ಕಾರು ಅಪಘಾತಕ್ಕೀಡಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಭುವನ್ ತಮ್ಮ ಆಕ್ಸಿಡೆಂಟ್ ಕುರಿತಾಗಿಯೇ ಹೊಸ ಹಾಡನ್ನು ಹಾಡಿದ್ದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಚ್ಚಾ ಬಾದಾಮ್ ಹಾಡಿನ ಮೂಲಕ ಗಳಿಸಿದ ಹಣದಲ್ಲಿ ಭುವನ್ ಇತ್ತೀಚೆಗಷ್ಟೇ ಸೆಕೆಂಡ್ ಹ್ಯಾಂಡ್ ಕಾರು ಖರಿದೀಸಿದ್ದರು. ಸೋಮವಾರ ಕಾರು ಓಡಿಸುವುದನ್ನು ಕಲಿಯುವಾಗ ಗೋಡೆಯೊಂದಕ್ಕೆ ಡಿಕ್ಕಿ ಹೊಡೆದು ಅವರಿಗೆ ಪೆಟ್ಟಾಗಿ, ಆಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ಚೇತರಿಸಿಕೊಂಡಿರುವ ಭುವನ್, ಅಮರ್ ನೋತುನ್ ಗರಿ (ಬಂಗಾಳಿಯಲ್ಲಿ ನನ್ನ ಹೊಸ ಕಾರು) ಸಾಲಿನಿಂದ ಆರಂಭವಾಗುವ ಹಾಡನ್ನು ಹಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೊಸ ಹಾಡಿನಲ್ಲಿ ಭುವನ್ ತಾವು ಹೇಗೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದರು ಮತ್ತು ಡ್ರೈವಿಂಗ್ ಕಲಿಯುವಾಗ ದುರದೃಷ್ಟವಶಾತ್ ಗೋಡೆಗೆ ಹೇಗೆ ಡಿಕ್ಕಿ ಹೊಡೆದರು ಹಾಗೂ ಅಪಘಾತದ ಸಮಯದಲ್ಲಿ ದೇವರು ಅವರನ್ನು ಹೇಗೆ ಗಂಭೀರತೆಯಿಂದ ರಕ್ಷಿಸಿದ ಎಂಬುದನ್ನು ಹಾಡಿನ ಮೂಲಕ ವಿವರಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿರುವ ಭುವನ್, ನಾನು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದೆ. ಮತ್ತು ನಾನು ಅದನ್ನು ಓಡಿಸಲು ಪ್ರಯತ್ನಿಸಿದೆ. ಗೋಡೆಗೆ ಅಪಘಾತ ಸಂಭವಿಸಿ ಗಾಯಗೊಂಡಿದೆ. ಈಗ ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಹಾಗಾಗಿ ನನ್ನ ಹೊಸ ಕಾರಿನಲ್ಲಿ ಹೊಸ ಹಾಡನ್ನು ರಚಿಸಲು ಯೋಚಿಸಿದೆ ಎಂದು ಹೇಳಿದ್ದಾರೆ.