ಉತ್ತರಪ್ರದೇಶದ ಪವರ್ಫುಲ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹೋದರಿಯ ಉದ್ಯೋಗವೇನು ಗೊತ್ತೆ ?

Share the Article

ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಕಣಕ್ಕೆ ಇಳಿದಿರುವ ಯೋಗಿ ಆದಿತ್ಯನಾಥ್, ಗೋರಖ್ ಪುರದಿಂದ  ಸ್ಪರ್ಧೆ ಮಾಡಿದ್ದಾರೆ. ಮತಪೆಟ್ಟಿಗೆಯಲ್ಲಿರು ಅಭ್ಯರ್ಥಿಗಳ ಭವಿಷ್ಯಕ್ಕೂ ಮೊದಲು  ಯೋಗಿ ಆದಿತ್ಯನಾಥ್ ವಿಚಾರದಲ್ಲಿ ಇನ್ನೊಂದು ವಿಶೇಷ ಸಂಗತಿ ಹೊರಬಿದ್ದಿದೆ.

ಯೋಗಿ ಆದಿತ್ಯನಾಥ(ಅಣ್ಣ) ದೇಶದ ದೊಡ್ಡ ರಾಜ್ಯ ಉತ್ತರಪ್ರದೇಶದ ಮುಖ್ಯಮಂತ್ರಿ, ಹಾಗಾದರೆ ಅವರಿಗಿರುವ ತಂಗಿ ಏನು ಉದ್ಯೋಗ ಮಾಡುತ್ತಿರಬಹುದು ಗೊತ್ತೆ ? ಅವರು ಯಾವ ರಾಜಕಾರಣಿಯೂ ಅಲ್ಲ, ಅಧಿಕಾರಿಗೂ ಅಲ್ಲ. ಅಷ್ಟೇ ಅಲ್ಲ ಆಕೆ ಓರ್ವ ಸಾಮಾನ್ಯ ಕೃತಿಯನ್ನು ಕೂಡ ಮಾಡುತ್ತಿಲ್ಲ!  ಅವರ ಸಹೋದರಿ ಶಶಿ ದೇವಿ ಋಷಿಕೇಶದಲ್ಲಿ ಯಕಶ್ಚಿತ್ ಓರ್ವ ಹೂವಿನ ವ್ಯಾಪಾರ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ !!

ಅಣ್ಣ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರೂ ಯೋಗಿ ಆದಿತ್ಯನಾಥ್ ಅವರ ಸಹೋದರಿ ಹೂವಿನ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿರುವುದು ವಿಶೇಷ. ಅಣ್ಣ ಮುಖ್ಯಮಂತ್ರಿಯಾದರೂ ಹೂ ಮಾರುವ ತಂಗಿಯ ಸರಳತೆಗೆ ಜನ ದೊಡ್ಡ ಸಲಾಂ ಎನ್ನುತ್ತಿದ್ದಾರೆ.‌ ಇಂತಹ ತಮ್ಮ ಕುಟುಂಬದ ವಿಷಯಗಳ ಆಧಾರದ ಮೇಲೆಯೇ ಪ್ರಧಾನಿ ಮೋದಿ ಇರಬಹುದು ಈಗ ಆದಿತ್ಯನಾಥ್ ನಂತಹ ನಾಯಕನೇ ಇರಬಹುದು : ಜನರಿಗೆ ಈ ನಾಯಕರುಗಳು ಇಷ್ಟ ವಾಗುತ್ತಿರುವುದು !!

Leave A Reply