ಮಂಗಳೂರು : ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಪೊಲೀಸ್ ಅಧಿಕಾರಿಯೋರ್ವರು ದಿಢೀರನೆ ಕುಸಿದು ಬಿದ್ದು ಸಾವು!

Share the Article

ಮಂಗಳೂರು : ಪೊಲೀಸ್ ಅಧಿಕಾರಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬೆರಳಚ್ಚು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಪ್ಪಣ್ಣ ನಾಗವ್ವ ( 37) ಮೃತರು.

ಇಂದು ಸಂಜೆ 5ರ ವೇಳೆಗೆ ಪಾಂಡೇಶ್ವರದಲ್ಲಿರುವ ಜಿಲ್ಲಾ ಎಸ್ ಪಿ ಕಚೇರಿಯಲ್ಲಿರುವ ಬೆರಳು ಮುದ್ರೆ ಘಟಕದ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಎ ಬಿ ಶೆಟ್ಟಿ ಸರ್ಕಲ್ ಬಳಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಬೆಳಗಾವಿಯ ರಾಮದುರ್ಗಾ ಹೊಸೂರು ನಿವಾಸಿಯಾಗಿದ್ದ ತಿಪ್ಪಣ್ಣ ಅವರು ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಆ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Leave A Reply