‘ ನನ್ನ ಹೆಂಡತಿಯಿಂದ ನನ್ನನ್ನು ರಕ್ಷಿಸಿ’ ಎಂದು ಗಂಡನಿಂದ ಮಹಿಳಾ‌ ಡಿಎಸ್ ಪಿ ಮನವಿ!

Share the Article

‘ ನನ್ನ‌ ಹೆಂಡತಿಯಿಂದ ನನ್ನನ್ನು ರಕ್ಷಿಸಿ’ ಎಂದು ಡಿಎಸ್ ಪಿ ಗೆ ಮನವಿ ಸಲ್ಲಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಈ ರೀತಿಯಾಗಿ ಗೋಗೆರೆಯುವ ಗಂಡ ಮಹಿಳಾ ಡಿಎಸ್ ಪಿ ಗೆ ಮನವಿ ಮಾಡಿದ್ದಾನೆ.

ಇದು ಮಧ್ಯಪ್ರದೇಶದಲ್ಲಿ ನೆಲೆಸಿರುವ ಪತಿಯೊಬ್ಬನ ಮನವಿ. ಭಿಂಡ್ ಜಿಲ್ಲೆಯ ಭಾರೌಲಿ ತಹಸಿಲ್ ನಿವಾಸಿ ಮನೋಜ್ ಕುಮಾರ್ ಎಂಬಾತ ಪತ್ನಿಯ ಕಿರುಕುಳದಿಂದ ಬೇಸತ್ತು ಇಂತಹದೊಂದು ಮನವಿ ಮಾಡಿದ್ದಾನೆ.

ನನ್ನ ಪತ್ನಿ ಸೋನಂ ನನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಾಳೆ ಎಂದು ಆರೋಪಿಸಿದ್ದಾನೆ. ಹೆಂಡತಿ ಸಮಯಕ್ಕೆ ಸರಿಯಾಗಿ ಊಟವನ್ನು ಕೊಡುವುದಿಲ್ಲ ಎನ್ನುತ್ತಾನೆ ಮನೋಜ್.

ನಾನೇನಾದರೂ ಮಾತನಾಡಿದರೆ ವರದಕ್ಷಿಣೆ ಕಿರುಕುಳ ನೀಡುವುದಾಗಿ ಬೆದರಿಕೆ ಹಾಕುತ್ತಾಳೆ ಎಂದು ಹೇಳಿದ್ದಾನೆ. ಹೆಂಡತಿಯ ಪೋಷಕರಿಗೆ ಈ ಬಗ್ಗೆ ಹೇಳಿದರೂ ಯಾರೂ ತಲೆಕೆಡಿಸಿಕೊಂಡಿಲ್ವಂತೆ‌. ಬರೌಲಿ ಠಾಣೆಗೆ ದೂರು ನೀಡಿದರೂ ಪೊಲೀಸರು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಬಹಳಷ್ಟು ಮಾನಸಿಕವಾಗಿ ನೊಂದ ಪತಿ ಕಡೆಗೆ ಮಹಿಳಾ ಡಿಎಸ್ ಪಿ ಪೂನಂ‌ ಥಾಪಾ ಅವರಿಗೆ ದೂರು ‌ನೀಡಿದ್ದಾನೆ. ನನ್ನನ್ನು ಪತ್ನಿಯಿಂದ ರಕ್ಷಿಸಬೇಕು ಎಂದು ಕೇಳಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Leave A Reply