ನಟಿ ಸಂಜನಾ ಗಲ್ರಾನಿಗೆ ಅಶ್ಲೀಲ ಮೆಸೇಜ್| ಪ್ರಸಾದ್ ಬಿದ್ದಪ್ಪ ಮಗ ಆ್ಯಡಂ ಬಿದ್ದಪ್ಪ ಪೊಲೀಸ್ ವಶದಲ್ಲಿ!

Share the Article

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದಲ್ಲಿ ಆ್ಯಡಂ ಬಿದ್ದಪ್ಪನನ್ನು ಇಂದಿರಾ ನಗರ ಪೊಲೀಸರು ಬಂಧಿಸಿದ್ದಾರೆ.

ಖ್ಯಾತ ಫ್ಯಾಷನ್ ಡಿಸೈನರ್, ಕೋರಿಯೋಗ್ರಾಫರ್ ಆಗಿರುವ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ಸಂಜನಾ ಅವರಿಗೆ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿದ ಆರೋಪವಿದೆ. ಈ ಕುರಿತು ಸಂಜನಾ ನೀಡಿದ ದೂರಿನನ್ವಯ ದೂರನ್ನು ದಾಖಲಿಸಲಾಗಿದೆ.

ಆದರೆ ಆ್ಯಡಂ ಬಿದ್ದಪ್ಪ ತಮ್ಮ ಮೇಲಿನ ಈ ಆರೋಪವನ್ನು ಒಪ್ಪಿಕೊಂಡಿಲ್ಲ. ಫೆ.25 ರಂದು ರಾತ್ರಿ 10 ರಿಂದ 12 ರವರೆಗೆ ಸಂಜನಾ ಗಲ್ರಾನಿ ಅವರಿಗೆ ಆ್ಯಡಂ ಬಿದ್ದಪ್ಪ ಅಶ್ಲೀಲ ಮೆಸೇಜ್ ಕಳಿಸಿದ್ದಾರೆ ಎಂಬ ಆರೋಪವಿದೆ.

ಈ ಕುರಿತು ವಾಟ್ಸಪ್ ಚಾಟ್ ದಾಖಲೆಯನ್ನೂ ಸಂಜನಾ ಪೊಲೀಸರಿಗೆ ನೀಡಿದ್ದಾರೆ. ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply