Home Entertainment ಆಗ ಕಚ್ಚಾ ಬದಾಮ್; ಈಗ ಪೇರಳೆ ; ಹೊಸ ಹಾಡು ವೈರಲ್ 

ಆಗ ಕಚ್ಚಾ ಬದಾಮ್; ಈಗ ಪೇರಳೆ ; ಹೊಸ ಹಾಡು ವೈರಲ್ 

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಮಾಧ್ಯಮಗಳಲ್ಲಿ ಕಚ್ಚಾಬಾದಮ್‌ ಹಾಡು ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ರೀಲ್ಸ್‌, ಮೋಜ್, ವಾಟ್ಸಾಪ್ ಎಲ್ಲಿ ನೋಡಿದರಲ್ಲಿ ಈ ಹಾಡಿನದ್ದೇ ಹವಾ ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದರು.  ಆದರೆ ಈಗ ಅಂತಹದ್ದೇ ರೀತಿಯ ಮತ್ತೊಂದು ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಈ ಹಾಡನ್ನು ಬೀದಿ ಬದಿಯಲ್ಲಿ ಪೇರಳೆ ಹಣ್ಣು ಮಾರುತ್ತಿರುವ ವ್ಯಾಪಾರಿಯೊಬ್ಬರು ತಮ್ಮ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹಾಡುತ್ತಿದ್ದಾರೆ. ಈ ಹಾಡು ಕೂಡ ಸಕ್ಕತ್ ಆಗಿ ವೈರಲ್ ಆಗುತ್ತಿದೆ.

ಪೇರಳೆ ಹಣ್ಣು ಮಾರಾಟ ಮಾಡುವ ವ್ಯಾಪಾರಿಯ ಹೊಸ ಹಾಡು ಇಂಟರ್‌ನೆಟ್‌ನಲ್ಲಿ ನೋಡುಗರನ್ನು ರಂಜಿಸುತ್ತಿದೆ. ಈತ ಪೇರಳೆ ಮಾರಲು ಹಾಡುವ ಹಾಡು ಯೇ ಹರಿ ಹರಿ, ಕಚ್ಚಿ ಕಚ್ಚಿ, ಪೀಲಿ ಪೀಲಿ, ಪಾಕಿ ಪಾಕಿ, ಮೀಠಿ ಮೀಠಿ, ಗದ್ದರ್ ಗದ್ದರ್, ತಾಜಾ ತಾಜಾ, ನಮಕ್ ಲಗಾ ಕೆ ಖಾಜ್ ಖಾಜಾ ಎಂದು ಹಿಂದಿಯಲ್ಲಿದ್ದು, ಜನರು ಕೇಳಿ ಆನಂದಿಸಿ ಗುಣಗುಣಿಸುತ್ತಿದ್ದಾರೆ.