ತೀಟೆ ತೀರಿಸಿಕೊಳ್ಳಲು ಬಳಸಿದ್ದು ದೇವಾಲಯದ ಆವರಣ!! ರಾಸಲೀಲೆಯಲ್ಲಿ ತೊಡಗಿದ್ದ ಜೋಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದದ್ದು ಹೇಗೆ!?
ಮೈಸೂರು: ದೇವಸ್ಥಾನವೊಂದರ ಆವರಣದಲ್ಲಿ ಜೋಡಿಯೊಂದು ರಾಸಲೀಲೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಜೋಡಿಯನ್ನು ರೆಡ್ ಹಾಂಡ್ ಆಗಿ ಹಿಡಿದು ಮಂಗಳಾರತಿ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಮೈಸೂರಿನ ನಂಜನಗೂಡು ಕೃಷ್ಣಾಪುರ ಗ್ರಾಮದ ದೇವಾಲಯವೊಂದರಲ್ಲಿ ಲ್ಲಿ ಈ ಘಟನೆ ನಡೆದಿದ್ದು, ದೇವಾಲಯದ ಬಾಗಿಲು ಹಾಕಿದ ನಂತರ ಬೈಕಿನಲ್ಲಿ ಬರುತ್ತಿದ್ದ ಜೋಡಿಯು ತಮ್ಮ ತೀಟೆ ತೀರಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗುತ್ತಿದ್ದರು.
ಪ್ರತೀ ದಿನವೂ ಆಗಮಿಸುವ ಈ ಜೋಡಿಗಳ ಮೇಲೆ ಕಣ್ಣಿಟ್ಟ ಅಲ್ಲಿನ ಸ್ಥಳೀಯರು ಮೊನ್ನೆಯ ದಿನ ಕಾರ್ಯಪ್ರವೃತ್ತರಾಗಿದ್ದರು. ದೇವಾಲಯದ ಒಳಹೋಗಿ ಒಂದು ಗಂಟೆಗೂ ಅಧಿಕ ಕಾಲ ಇದ್ದು ಬಳಿಕ ಬರುತ್ತಿದ್ದ ಜೋಡಿಯ ಬೆನ್ನ ಹಿಂದೆಯೇ ಹೋಗಿ ನೋಡಿದಾಗ ರಾಸಲೀಲೆ ಬೆಳಕಿಗೆ ಬಂದಿದೆ.
ಗ್ರಾಮಸ್ಥರ ಕೈಗೆ ಸಿಕ್ಕ ಜೋಡಿಗೆ ಸರಿಯಾಗಿ ಮಂಗಳಾರತಿ ಮಾಡಿ ಕಳುಹಿಸಲಾಗಿದ್ದು, ಈ ಬಗ್ಗೆ ಯಾವುದೇ ದೂರು ದಾಖಲು ಆಗಿರುವುದಿಲ್ಲ.