Home News ಕಳ್ಳತನ ಮಾಡಲು ಪುರುಷರ ಗೆಟಪ್ ಹಾಕಿಕೊಳ್ಳುವ ಖತರ್ನಾಕ್ ಕಳ್ಳಿ ಕೊನೆಗೂ ಪೊಲೀಸ್ ಬಲೆಗೆ !!

ಕಳ್ಳತನ ಮಾಡಲು ಪುರುಷರ ಗೆಟಪ್ ಹಾಕಿಕೊಳ್ಳುವ ಖತರ್ನಾಕ್ ಕಳ್ಳಿ ಕೊನೆಗೂ ಪೊಲೀಸ್ ಬಲೆಗೆ !!

Hindu neighbor gifts plot of land

Hindu neighbour gifts land to Muslim journalist

ಕಳ್ಳತನ ಮಾಡಲು ಕಳ್ಳರು ಏನು ಬೇಕಾದರೂ ಮಾಡುತ್ತಾರೆ. ಎಂತಹ ಉಪಾಯಗಳನ್ನಾದರೂ ಜಾರಿಗೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಅಂತೆಯೇ ಇಲ್ಲಿ ಪುರುಷರ ಬಟ್ಟೆಗಳನ್ನು ಧರಿಸಿ ಕಳ್ಳತನ ಮಾಡಲು ತೆರಳಿದ್ದ 24 ವರ್ಷದ ಯುವತಿಯೋರ್ವಳು ಸಿಕ್ಕಿಬಿದ್ದಿದ್ದು, ಮುಂಬೈನ ಸಹರ್ ನಲ್ಲಿ ಪೊಲೀಸರು ಆಕೆಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಚಾಕಲ ನಿವಾಸಿ ಪೂಜಾ ಲೋಂಡೆ ಪುರುಷನ ವೇಷಧರಿಸಿ ಸಿಕ್ಕಿಬಿದ್ದ ಆರೋಪಿ. ಪೂಜಾ ತನ್ನ ಸಹಾಯಕರೊಂದಿಗೆ ಫುಟ್‍ಪಾತ್‍ನಲ್ಲಿ ನಿಲ್ಲಿಸಿದ ವಾಹನಗಳನ್ನು ಕದಿಯುತ್ತಿದ್ದಳು. ಕಳ್ಳತನ ಮಾಡಬೇಕಾದರೆ ಪುರುಷನ ವೇಷಧರಿಸುವುದೇ ಈಕೆಯ ವಿಶೇಷತೆ. ಕಾರಿನಲ್ಲಿ ಮಲಗಿದ್ದ ಚಾಲಕನನ್ನು ಗಮನಿಸಿದ ಪೂಜಾ ತನ್ನ ಗ್ಯಾಂಗ್ ಸಹಾಯದಿಂದ ಕಾರನ್ನು ಕದಿಯಲು ಮುಂದಾಗಿದ್ದಾಳೆ.

ಪೂಜಾ ತನಗೆ ತಾನೇ ಹಾನಿ ಮಾಡಿಕೊಳ್ಳುವುದಾಗಿ ಬೆದರಿಸುತ್ತಾ ಬ್ಲೇಡನ್ನು ಹೊರತೆಗೆದು ಅವಳ ಬಾಯಿಗೆ ಇಟ್ಟುಕೊಂಡಿದ್ದಾಳೆ. ಗಾಬರಿಯಾದ ಚಾಲಕ ಪೂಜಾಳನ್ನು ತಡೆಯಲು ಮುಂದಾಗಿದ್ದಾನೆ. ಚಾಲಕ ಹತ್ತಿರ ಬರುತ್ತಿದಂತೆಯೇ ಆಕೆ ಅವನ ಬಳಿ ಇದ್ದ ಗಾಡಿ ಕೀಯನ್ನು ಕಸಿದುಕೊಂಡು, ತನ್ನ ಗ್ಯಾಂಗ್ ಸಮೇತ ಪರಾರಿಯಾಗಿದ್ದಾಳೆ.

ಈ ಕುರಿತು ಚಾಲಕ ಪೊಲೀಸರಿಗೆ ದೂರು ನೀಡಿದ್ದು, ಪುರುಷ ವೇಷ ಧರಿಸಿದ ಮಹಿಳೆಯೊಬ್ಬಳು ತನ್ನ ಗ್ಯಾಂಗ್ ಸಹಾಯದಿಂದ ನನ್ನ ಕಾರನ್ನು ಕದ್ದಿದ್ದಾಳೆ. ಈ ವೇಳೆ ಬಾಯಿಗೆ ಬ್ಲೇಡ್ ಇಟ್ಟು ನನಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ನಾನು ಗಾಬರಿಯಾಗಿ ಅವರನ್ನು ತಡೆಯಲು ಮುಂದಾದೆ. ಆದರೆ ಅವರೇ ನನ್ನ ಗಾಡಿ ಕೀ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾನೆ.

ಸಹರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ಕೊಟ್ಟಿದ್ದು, ಚಾಲಕ ನೀಡಿದ ವಿವರಣೆಯ ಆಧಾರದ ಮೇಲೆ ನಾವು ನಮ್ಮ ಮೂಲಗಳನ್ನು ಟ್ಯಾಪ್ ಮಾಡಿದ್ದೇವೆ. ಕಳೆದ ವಾರ ಮಹಿಳೆಯನ್ನು ಬಂಧಿಸಿದ್ದೇವೆ. ತನಿಖೆಯ ಸಮಯದಲ್ಲಿ ಆಕೆಯ ವಿರುದ್ಧ 2018 ರಲ್ಲಿ ವಿಲೆ ಪಾರ್ಲೆ ಮತ್ತು ಸಾಂತಾಕ್ರೂಜ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ಮತ್ತು ದರೋಡೆ ಪ್ರಕರಣ ದಾಖಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.