ಶಿವರಾತ್ರಿಯ ಹಿಂದಿನ ದಿನ ಲಕ್ಷ್ಮೀ ಬಂದೇ ಬಿಟ್ಟಳು ದಿನಗೂಲಿ ನೌಕರನ ಮನೆಗೆ | ಅದೃಷ್ಟದಾಟ ಬಲು ಸೊಗಸು!
‘ದೇನೆ ವಾಲಾ ಜಬ್ಬೀ ದೇತಾ ಹೈ ಚಪ್ಪಡ್ ಪಾಡ್ ಕೇ ದೇತಾ ಹೈ ‘ ಅಂತಾ ಒಂದು ಮಾತಿದೆ. ಇದರರ್ಥ ದೇವರು ಕೊಟ್ಟಾಗ ಹಂಚು ಹಾರಬೇಕು ಅಷ್ಟು ಕೊಡ್ತಾನೆ ಎಂದು. ಹಾಗೆಯೇ ಈ ಅದೃಷ್ಟದ ಘಟನೆ ನಡೆದ್ದದ್ದು. ಕೇರಳದ ಕೊಟ್ಟಾಯಂ ಮೂಲದ ದಿನಗೂಲಿ ನೌಕರ ಗೋಪಿ ವಿಷಯದಲ್ಲಿ. ಗೋಪಿಯ ಬಾಳಲ್ಲಿ ಶಿವರಾತ್ರಿಯ ಹಿಂದಿನ ದಿನವೇ ಲಾಟರಿ ರೂಪದಲ್ಲಿ ಅದೃಷ್ಟದ ಲಕ್ಷ್ಮೀ ಎಂಟ್ರಿ ನೀಡಿದ್ದಾಳೆ. ಗೋಪಿ ಖರೀದಿ ಮಾಡಿದ್ದ ಲಾಟರಿಗೆ ಬರೋಬ್ಬರಿ 75 ಲಕ್ಷ ರೂ.ಬಹುಮಾನ ಬಂದಿದೆ.
ಅಂದ ಹಾಗೆ ಫೆ.28 ರಂದು ಈ ಲಾಟರಿ ಫಲಿತಾಂಶ ಬಂದಿತ್ತು. ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಥ್ರಿಕ್ಕೊಡಿಥನಂ ಮ್ಯಾಜಿಕ್ ಲಕ್ಕಿ ಸೆಂಟರ್ ನಲ್ಲಿ ಲಾಟರಿ ಖರೀದಿಸಿದ್ದರು. ಶಿವರಾತ್ರಿ ಹಿಂದಿನ ದಿನವೇ ಈ ಅದೃಷ್ಟ ಲಕ್ಷ್ಮೀಯೂ ಗೋಪಿ ಬಾಳಲ್ಲಿ ಎಂಟ್ರಿ ಕೊಟ್ಟಿದ್ದಾಳೆ.
ಈ ಹಣ ಒಲಿದು ಬಂದಿದ್ದು, ಗೋಪಿ ಕುಟುಂಬ ತುಂಬಾ ಖುಷಿಯಾಗಿದೆ.