ಭಾರತೀಯ ಹಲವು ಸಿನಿಮಾ ಚಿತ್ರೀಕರಣಕ್ಕೆ ಉಕ್ರೇನ್ ತಾಣ ; ಕಾರಣ ಏನು ಗೊತ್ತೆ ?

Share the Article

ಉಕ್ರೇನ್ ಭಾರತೀಯ ಫಿಲ್ಮ್‌ಮೇಕರ್‌ಗಳ ಪಾಲಿಗೆ ಅಚ್ಚುಮೆಚ್ಚಿನ ಶೂಟಿಂಗ್ ತಾಣ. ನಿರ್ದೇಶಕರು ನಿರ್ಮಾಪಕರು ಇಲ್ಲೇ ಶೂಟಿಂಗ್ ತಾಣ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಗೊತ್ತೆ ? ಯಾವ ಯಾವ ಸಿನಿಮಾ ಇಲ್ಲಿ ಚಿತ್ರೀಕರಣಗೊಂಡಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ರಾಜಮೌಳಿ ನಿರ್ದೇಶನದ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಅಭಿನಯದ ಬಹುಕೋಟಿ ಬಜೆಟ್‌ ಚಿತ್ರ ‘ಆರ್‌ಆರ್‌ಆರ್‌’ ಸಿನಿಮಾ ಕೂಡ ಉಕ್ರೇನ್‌ನಲ್ಲೇ ಚಿತ್ರೀಕರಣಗೊಂಡಿದೆ. ಆರ್‌ಆರ್‌ಆರ್‌’, 99 ಸಾಂಗ್ಸ್, ದೇವ್, ವಿನ್ನರ್ ಸೇರಿದಂತೆ ಹಲವು ಚಿತ್ರೀಕರಣಗಳು ಇಲ್ಲಿ ನಡೆದಿದೆ.

ಜನವರಿಯಿಂದ ಏಪ್ರಿಲ್‌ವರೆಗೆ ಉಕ್ರೇನ್‌ನಲ್ಲಿ ಚಳಿಗಾಲ. ಹೀಗಾಗಿ, ಮೇ ತಿಂಗಳಿನಿಂದ ಶೂಟಿಂಗ್ ಕಾಲ ಉಕ್ರೇನ್ ನಲ್ಲಿ ಪ್ರಾರಂಭವಾಗುತ್ತದೆ.ಉಕ್ರೇನ್‌ನಲ್ಲಿ ಶೂಟಿಂಗ್ ವೆಚ್ಚ ಶೇಕಡ 20-30 ರಷ್ಟು ಕಡಿಮೆ. ಹೀಗಾಗಿ ಕಡಿಮೆ ಖರ್ಚಿನಲ್ಲಿ ಸುಂದರ ಲೊಕೇಷನ್‌ಗಳಲ್ಲಿ ಶೂಟಿಂಗ್ ಮಾಡುವ ಅವಕಾಶ ಉಕ್ರೇನ್‌ನಲ್ಲಿದೆ.‌

Leave A Reply