ಉಡುಪಿ : ಬೆಳ್ಳಂಬೆಳಗ್ಗೆ ಭೀಕರ ಅಪಘಾತ | ತಾಯಿ ಮನೆಗೆ ಬಂದಿದ್ದ ಯುವತಿ ದಾರುಣ ಸಾವು!

Share the Article

ಉಡುಪಿ : ಸಂತೆಕಟ್ಟೆ ಬಳಿ ಬುಧವಾರ ಮುಂಜಾನೆ ಅಪಘಾತ ನಡೆದಿದ್ದು ಯುವತಿ‌ ಸಾವನ್ನಪ್ಪಿದ್ದಾರೆ.

ಮೃತ ಯುವತಿಯನ್ನು ಗಾಯತ್ರಿ ಪೈ ಎಂದು ಗುರುತಿಸಲಾಗಿದೆ. ಯುವತಿ ಹುಬ್ಬಳ್ಳಿಯಿಂದ ಬಂದಿದ್ದು, ಈಕೆಯನ್ನು ಕರೆದುಕೊಂಡು ಹೋಗಲು ತಂದೆ ಟಿ.ಗಣೆಶ್ ಪೈ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಕರೆದುಕೊಂಡು ಹಿಂತಿರುಗುವ ಸಂದರ್ಭದಲ್ಲಿ ಉಡುಪಿಯಿಂದ ಸಂತೆಕಟ್ಟೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸು ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಣೇಶ್ ಪೈ ಅವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply