ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಗೆ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟ| ಪರೀಕ್ಷೆಗೆ ಹಾಜರಾಗುವವರು ತಿಳಿದಿರಲೇಬೇಕಾದ ಮುಖ್ಯವಾದ ಮಾಹಿತಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾರ್ಚ್ 12, 13 2022 ರಂದು ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಕಡ್ಡಾಯ ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಿದೆ. ಇದರ ಜೊತೆಗೆ ಐಚ್ಛಿಕ ವಿಷಯಗಳಿಗೆ ಮಾರ್ಚ್ 14 ರಿಂದ 16 ರವರೆಗೆ ಪರೀಕ್ಷೆ ನಡೆಸಲಿದೆ. ಅಂದಹಾಗೆ ಈ ಹುದ್ದೆಗಳಿಗೆ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕಾದ ಹಾಗೂ ತಿಳಿದಿರಬೇಕಾದ ಮಾರ್ಗಸೂಚಿಗಳು ಇಲ್ಲಿ ನೀಡಲಾಗಿದೆ.

  1. ಪ್ರವೇಶ ಪತ್ರವು ದ್ವಿಪ್ರತಿಯುಳ್ಳದ್ದು. ಒಂದು ಅಭ್ಯರ್ಥಿ ಪ್ರತಿ, ಮತ್ತೊಂದು ಕೆಇಎ ಪ್ರತಿ.
  2. ಪ್ರವೇಶ ಪತ್ರದಲ್ಲಿ ನಿಗದಿತ ಎರಡು ಸ್ಥಳಗಳಲ್ಲಿ ಅಭ್ಯರ್ಥಿಯ ಇತ್ತೀಚಿನ ಬಣ್ಣದ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಅಂಟಿಸಿ, ಅದರ ಮೇಲೆ ಗೆಜೆಟೆಡ್ ಅಧಿಕಾರಿಯ ಮೊಹರು ಮತ್ತು ಸಹಿ ಪಡೆಯಬೇಕು.
  3. ಒಂದು ವೇಳೆ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಐಚ್ಛಿಕ ವಿಷಯಗಳಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಸಂಬಂಧಿಸಿದ ಅರ್ಜಿ ಸಂಖ್ಯೆಯನ್ನು ನಮೂದಿಸಿ ಪ್ರತಿಯೊಂದು ಐಚ್ಛಿಕ ವಿಷಯಗಳಿಗೆ ಪ್ರತ್ಯೇಕವಾದ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
  4. ಅಭ್ಯರ್ಥಿಯು ಒಂದೇ ಒಂದು ಐಚ್ಛಿಕ ವಿಷಯಕ್ಕೆ ಮಾತ್ರ ಅರ್ಜಿ ಸಲ್ಲಿಸಿದ್ದರೆ, ಒಂದು ಪ್ರವೇಶ ಪತ್ರವನ್ನು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಇರುತ್ತದೆ.
  5. ಅಭ್ಯರ್ಥಿಯು 2 ಪ್ರತಿಯ ಪ್ರವೇಶ ಪತ್ರವನ್ನು ತನ್ನೊಡನೆ ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗಬೇಕು.
  6. ಪ್ರವೇಶ ಪತ್ರದ ಕೆಇಎ ಪ್ರತಿಯನ್ನು ಆಯಾ ಐಚ್ಛಿಕ ವಿಷಯದ ಪರೀಕ್ಷೆ ಮುಗಿದ ನಂತರ ಕೊಠಡಿ ಮೇಲ್ವಿಚಾರಕರಿಗೆ ತಿಳಿಸಬೇಕು.
  7. ಪ್ರವೇಶ ಪತ್ರದ ಕೆಇಎ ಪ್ರತಿಯನ್ನು ಕಡ್ಡಾಯ ಪತ್ರಿಕೆಯ ಪರೀಕ್ಷೆಯ ದಿನಗಳಂದು ಕೊಠಡಿ ಮೇಲ್ವಿಚಾರಕರಿಗೆ ನೀಡಬಾರದು‌.
Leave A Reply

Your email address will not be published.