ಪ್ರಚೋದನಕಾರಿ ಭಾಷಣಗಾರ್ತಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ

Share the Article

ಹಿಂದೂ ಸಂಘಟನೆಗಳ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆಯುತ್ತಿರುವ ಶಿವಲಿಂಗ ಶುದ್ಧಿ ಕಾರ್ಯಕ್ರಮಕ್ಕೆ ಚೈತ್ರಾ ಕುಂದಾಪುರ ಹಾಗೂ ಮುತಾಲಿಕ್ ಭಾಗವಹಿಸಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು.

ಆದರೆ ಜಿಲ್ಲಾಡಳಿತದ ನಿರ್ಬಂಧವನ್ನು ಧಿಕ್ಕರಿಸಿ ಜಿಲ್ಲೆಗೆ ಪ್ರವೇಶ ಮಾಡಿದ ಆರೋಪದಡಿಯಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡು ಬಳಿಕ ಗಡಿ ದಾಟಿಸಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಚೈತ್ರಾ ಕುಂದಾಪುರ ಕಳೆದ ಕೆಲ ವರ್ಷಗಳಿಂದ ಹಿಂದೂ ಸಮಾವೇಶಗಳಲ್ಲಿ ಭಾಗವಹಿಸಿ ಪ್ರಚೋದನಕಾರಿ ಹಾಗೂ ಕೋಮುದ್ವೇಷ ಹರಡುವಂತಹ ಭಾಷಣ ಮಾಡುತ್ತಿದ್ದೂ, ಇದರಿಂದ ಅಶಾಂತಿಯೂ ಸೃಷ್ಟಿಯಾದ ಹಲವು ನಿದರ್ಶನಗಳಿವೆ.

Leave A Reply