Home Breaking Entertainment News Kannada ಕನ್ನಡದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಮಾತೃವಿಯೋಗ

ಕನ್ನಡದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಮಾತೃವಿಯೋಗ

Hindu neighbor gifts plot of land

Hindu neighbour gifts land to Muslim journalist

ಕನ್ನಡದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ವಿ.ರವಿಚಂದ್ರನ್ ತಾಯಿ ಶ್ರೀಮತಿ ಪಟ್ಟಮ್ಮಾಳ್ ವೀರಸ್ವಾಮಿ‌ ಇಂದು ಬೆಳಗ್ಗೆ 6.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

83 ವರ್ಷದ ಪಟ್ಟಮ್ಮಾಳ್ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಕನ್ನಡದ ಹೆಸರಾಂತ ನಿರ್ಮಾಪಕ ವೀರಸ್ವಾಮಿ‌ ಅವರ ಧರ್ಮಪತ್ನಿಯಾದ ‌‌ಪಟ್ಟಮ್ಮಾಳ್ ಅವರಿಗೆ, ರವಿಚಂದ್ರನ್ ಮತ್ತು ಬಾಲಾಜಿ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ.

ಹಲವು ವರ್ಷಗಳಿಂದ ಅಮ್ಮನ ಆರೈಕೆಯಲ್ಲಿದ್ದರು ರವಿಚಂದ್ರನ್. ಇಂದು ಬೆಳಗ್ಗೆ 10.30 ರ ನಂತರ ರವಿಚಂದ್ರನ್ ಅವರ ಸ್ವಗೃಹದಲ್ಲಿ‌ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ರವಿಚಂದ್ರನ್ ಕುಟುಂಬ ಸದಸ್ಯರು ಹೇಳಿದ್ದಾರೆ.