Home latest ವಂಚನೆ ಮಾಡಿ ಬಿಟ್ಟು ಹೋದ ಮಗ| ಹೆತ್ತಬ್ಬೆಗಿಂತ ಚೆನ್ನಾಗಿ ಸಾಕಿ ಸಲಹಿದ ಮಲತಾಯಿಗೆ ಮಗನಿಂದ ಮೋಸ

ವಂಚನೆ ಮಾಡಿ ಬಿಟ್ಟು ಹೋದ ಮಗ| ಹೆತ್ತಬ್ಬೆಗಿಂತ ಚೆನ್ನಾಗಿ ಸಾಕಿ ಸಲಹಿದ ಮಲತಾಯಿಗೆ ಮಗನಿಂದ ಮೋಸ

Hindu neighbor gifts plot of land

Hindu neighbour gifts land to Muslim journalist

ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ಅಮ್ಮ ಇರಲ್ಲ ಅಂತ ಒಂದು ಮಾತಿದೆ. ಅದೇ ಮಾತು ಈಗ ಇಲ್ಲಿ ನಾವು ಹೇಳುವ ಒಂದು ಘಟನೆಗೆ ಸಾಕ್ಷಿಯಾಗಿ ನಿಂತಿದೆ.

ಮಕ್ಕಳು ಸಣ್ಣವರಿದ್ದಾಗಲೇ ತಂದೆ ಎರಡನೇ ಮದುವೆ ಆದ. ಬಂದ ಮಲತಾಯಿ ಅಮ್ಮ‌ ಹೆತ್ತಬ್ಬೆಗಿಂತ ಚೆನ್ನಾಗಿಯೇ ಸಾಕಿದಳು ಮಕ್ಕಳನ್ನು. ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇನೋ ಅನ್ನೋ ತರ ಬೆಳೆಸಿದಳು.

ಸಾಕಿ ಬೆಳಿಸಿದ ಮಕ್ಕಳಿಗೆ ಸರಕಾರಿ ಕೆಲಸವೂ‌ ಸಿಗುತ್ತೆ. ಇದನ್ನು ಕೇಳಿದ ಸಾಕಿದ ಅಮ್ಮ ತನ್ನ ಬದುಕು ಬದಲಾಗುತ್ತೆ ಅಂದುಕೊಂಡಿದ್ದಳು. ಆದರೆ ಮಗ ಮಾತ್ರ ಶಾಕ್ ಕೊಟ್ಟಿದ್ದ.

ಈ ಘಟನೆ ನಡೆದಿರೋದು ಬೆಳಗಾವಿಯಲ್ಲಿ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಟದ ನಿವಾಸಿ ಬಸವಣ್ಣೆವ್ವಾ. ಗಂಡ ಗುರುಪಾದಪ್ಪ ಎಂಬುವವನಿಗೆ ಎರಡನೇ ಹೆಂಡತಿಯಾಗಿದ್ದು, ಈಕೆಗೆ ಮಕ್ಕಳಿಲ್ಲ. ಮೊದಲ ಹೆಂಡತಿಗೆ ಇದ್ದ ಎರಡು ಮಕ್ಕಳನ್ನು ತನ್ನ ಹೊಟ್ಟೆಯಲ್ಲೇ ಹುಟ್ಟಿದ ಮಕ್ಕಳಂತೆ ಸಾಕಿ ಸಲಹಿದಾಕೆ ಈಕೆ. ಮಕ್ಕಳನ್ನು ಚೆನ್ನಾಗಿ ಓದಿಸಿ ಸರಕಾರಿ ಕೆಲಸ ಕೂಡ ಕೊಡಿಸುತ್ತಾರೆ. ಈ ವೇಳೆ ಹಿರಿಯ ಮಗ ಬಸಪ್ಪ ಆಸ್ತಿ ಪಾಲು ಮಾಡಿ ತಾಯಿ ಪಾಲಿಗೆ ಎರಡು ಎಕರೆ ಜಮೀನು ಒಂದು ಮನೆ ನೀಡಿರ್ತಾನೆ. ಇದಾದ ಕೆಲ ವರ್ಷಗಳಲ್ಲಿ ಹಿರಿಯ ಮಗ ಬಸಪ್ಪ ಅನಾರೋಗ್ಯದಿಂದ ಮೃತಪಡುತ್ತಾನೆ. ಕಿರಿಯ ಮಗ ಬೆಂಗಳೂರಿಗೆ ಹೋಗುತ್ತಾನೆ‌. ಹೀಗೆ ಹೋಗುವಾಗ ಪಾಪಿ ಮಗ ಶಿಂಗಪ್ಪ ತಾಯಿಯ ಹೆಸರಲ್ಲಿದ್ದ ಎರಡು ಎಕರೆ ಜಮೀನನ್ನು ನಂಬಿಸಿ ಸಹಿ ಮಾಡಿಸಿ ಮಾರಾಟ ಮಾಡಿ ಈ ಹಣ ನಿನ್ನ ಬ್ಯಾಂಕಬಸವಣ್ಣೆವ್ವಾ ಹಾಕ್ತೀನಿ ಎಂದು ಹೇಳಿ ಹೋದವ ಹಾಗೇ ಮಾಡದೇ ಮೋಸ ಮಾಡಿದ್ದಾನೆ.

ಆದರೆ ವೃದ್ಧಾಪ್ಯದಲ್ಲಿರುವ ತಾಯಿಗೆ ತನ್ನನ್ನು ತಾನು ನಿಭಾಯಿಸಲು ಸಾಧ್ಯವಿಲ್ಲದ ಸ್ಥಿತಿಗೆ ಬರುತ್ತಾರೆ. ಈ ವೃದ್ಧಾಪ್ಯ ಕಾಲದಲ್ಲಿಯಾದರೂ ಮಗನ ಜೊತೆಗೆ ಇರಬೇಕು ಅನ್ನೋ ಕಾರಣಕ್ಕೆ ಇದೀಗ ಮಗ ಶಿಂಗಪ್ಪನನ್ನು ಹುಡುಕಿಕೊಡಿ ಅಂತಾ ಬಸವಣ್ಣೆವ ಕಣ್ಣೀರಿಡುತ್ತಾಳೆ. ಆತ ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದು, ಆತನನ್ನು ಹುಡುಕಿಕೊಡಿ ಎಂದು ಡಿಸಿ ಬಳಿ ಬಂದು ಬಸವಣ್ಣೆವ್ವಾ ಮನವಿ ಮಾಡಿಕೊಂಡಿದ್ದಾಳೆ.