ವಾಹನ ಸವಾರರೇ ಗಮನಿಸಿ : ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ | DL, LLR ಸೇರಿ ಹಲವು ಸೇವೆಗಳಿಗೆ ‘ ಸಾರಥಿ-4’, ವಾಹನ್ – 4 ತಂತ್ರಾಂಶ ಅನುಷ್ಠಾನ
ಬೆಂಗಳೂರು : ಸಾರಿಗೆ ಇಲಾಖೆಯು ವಾಹನ ಸವಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಸಾರಿಗೆ ಇಲಾಖೆಯು ಸಾರಥಿ 4 ಹಾಗೂ ವಾಹನ್ – 4 ಆನ್ಲೈನ್ ಆಧಾರಿತ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಸೂಚನೆ ನೀಡಿದೆ.
ಸಾರಿಗೆ ಇಲಾಖೆಯು ಸಾರಥಿ – 4, ವಾಹನ್ -4 ಆನ್ಲೈನ್ ಆಧಾರಿತ ಸೇವೆಗಳ ಪೈಕಿ ವಾಹನ ಮಾಲೀಕತ್ವ ವರ್ಗಾವಣೆ, ತಾತ್ಕಾಲಿಕ ನೋಂದಣಿ ಹಾಗೂ ಕಂಡಕ್ಟರ್ ಲೈಸೆನ್ಸ್ ಗಳಿಗೆ ಸಂಬಂಧಿಸಿದ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆದ್ಯತೆ ನೀಡುವಂತೆ ನಿರ್ದೇಶನ ನೀಡಲಾಗಿದೆ.
ಆರ್ ಟಿಒ ಕಚೇರಿಗಳಲ್ಲಿ ಫೆಸ್ ಲೆಸ್ ಸೇವೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಆನ್ ಲೈನ್ ಸೇವೆಗೆ ಪೂರಕವಾದ ಸೌಲಭ್ಯ ಹಾಗೂ ತಂತ್ರಜ್ಞಾನವನ್ನು ಅಳವಡಿಸದ ಹಿನ್ನೆಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.