ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿ ಒಂದೇ ಮನೆಯಲ್ಲಿ ಬಾಳುತ್ತಿರುವ ಜೋಡಿ!! ಪೊಲೀಸರ ತನಿಖೆಯ ಬಳಿಕ ಬಯಲಾಯಿತು ನಾನು ಅವನಲ್ಲ ಅವಳು!

Share the Article

ಅವರಿಬ್ಬರು ರಕ್ತ ಸಂಬಂಧಿಗಳಲ್ಲ, ಸಹಪಾಠಿಗಳೂ ಅಲ್ಲ, ಆದರೂ ಅವರಿಬ್ಬರು ಬೇರೆಯೇ ಮನೆಯೊಂದರಲ್ಲಿ ಜೊತೆಯಾಗಿ ವಾಸಿಸುತ್ತಿರುವ ವಿಚಾರವು ವಿವಾದ ಹುಟ್ಟಿಹಾಕಿದ್ದು, ಪ್ರಕರಣ ಠಾಣೆಯ ಮೆಟ್ಟಿಲೇರಿದ ಬಳಿಕ ಇತ್ಯರ್ಥ ವಾದ ಘಟನೆಯೊಂದು ಬೆಳಕಿಗೆ ಬಂದಿದೆ.

ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್ ಪಟ್ಟಣದಲ್ಲಿ ಎದ್ದ ಈ ವಿವಾದ, ಯುವತಿಯ ತಾಯಿಯು ಪೊಲೀಸ್ ದೂರು ಕೊಟ್ಟ ಬಳಿಕ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ನನ್ನ ಮಗಳು ಇನ್ನೊಬ್ಬ ಯುವತಿಯೊಂದಿಗೆ ಲಿವಿಂಗ್ ಟುಗೇದರ್ ರಿಲೇಶನ್ ನಲ್ಲಿ ಇದ್ದಾಳೆ, ಅದಲ್ಲದೆ ಅವರಿಬ್ಬರೂ ವಿವಾಹವಾಗುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಳಲನ್ನು ತೋಡಿಕೊಂಡಿದ್ದರು.

ಈ ಬಗ್ಗೆ ಪೊಲೀಸರು ಆ ಸಲಿಂಗಿ ಜೋಡಿಯನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದು, ನಾವಿಬ್ಬರು ಸಹೋದರಿಯರಂತೆ ಬದುಕುತ್ತಿದ್ದೇವೆ. ಅದಲ್ಲದೆ ಓರ್ವ ಯುವತಿಗೆ ಇಷ್ಟ ಇಲ್ಲದ ಮದುವೆ ನಡೆಸಲು ಮನೆಯಲ್ಲಿ ಸಿದ್ಧತೆ ಮಾಡಿಕೊಂಡಿದ್ದು ಇದರಿಂದ ಬೇಸತ್ತ ಆಕೆ ನನ್ನೊಂದಿಗೆ ವಾಸವಿದ್ದಾಳೆ ಎಂದು ತಿಳಿಸಿದ್ದಾಳೆ.

Leave A Reply