ಧರ್ಮಸ್ಥಳ: ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿ ಪ್ರಭಾವ ಮೆರೆದ ಮುಖಂಡನಿಗೆ ಕಾರ್ಯಕರ್ತರಿಂದಲೇ ಧಿಕ್ಕಾರ!?
ಧರ್ಮಸ್ಥಳ: ಇಲ್ಲಿನ ಹಿಂದೂ ನಾಯಕರೊಬ್ಬರ ಹೆಸರು ಕಳೆದ ಎರಡು ದಿನಗಳಿಂದ ಹೆಚ್ಚು ಪ್ರಚಲಿತದಲ್ಲಿರುವುದು ಜನತೆಯನ್ನು ಆತಂಕಕ್ಕೆ ತಳ್ಳಿದೆ. ಸದಾ ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಪ್ರಭಾವ ಮೆರೆದಿದ್ದ ವಿಶ್ವ ಹಿಂದೂ ಪರಿಷತ್ ನ ಮುಖಂಡ ಭಾಸ್ಕರ್ ಧರ್ಮಸ್ಥಳ ವಿರುದ್ಧ ಈಗ ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಇದಕ್ಕೆಲ್ಲ ಬಲವಾದ ಕಾರಣವೊಂದಿದೆ.
ಹೌದು, ಮೊನ್ನೆಯ ದಿನ ಭಾಸ್ಕರ್ ಧರ್ಮಸ್ಥಳ ಅವರ ಮುತುವರ್ಜಿಯಲ್ಲಿ ಹಿಂದೂ ಯುವತಿಯೊಬ್ಬಳನ್ನು ಮುಸ್ಲಿಂ ಯುವಕನೊಂದಿಗೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿರುವ ಸತ್ಯನಾರಾಯಣ ದೇವಾಲಯದಲ್ಲಿ ವಿವಾಹ ಮಾಡಿಸಿ ಕೊಡಲಾಗಿತ್ತು. ಇದಕ್ಕೆ ಭಾಸ್ಕರ್ ಧರ್ಮಸ್ಥಳ ಅವರು ನೇರವಾಗಿ ಸಹಕರಿಸಿದ್ದಾರೆ, ಹಣದ ಆಮಿಷ ಒಡ್ಡಿದ್ದಾರೆ ಎಂದು ಅಲ್ಲಿನ ಅರ್ಚಕರು ಸ್ಪಷ್ಟನೆ ನೀಡಿದ್ದರು.
ಇದನ್ನು ತಿಳಿದ ಕಾರ್ಯಕರ್ತರು ಭಾಸ್ಕರ್ ಅವರ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದಲ್ಲದೆ, ಸದಾ ಹಿಂದುತ್ವ ಎಂದು ನಡೆದಾಡುವ, ಧರ್ಮಕ್ಕಾಗಿ ಹಲವು ಪ್ರಕರಣಗಳನ್ನು ಮೈಮೇಲೆ ಹಾಕಿಸಿಕೊಳ್ಳುವ ನಿಷ್ಠಾವಂತರ ಕೋಪಕ್ಕೆ ಕಾರಣವಾಗಿದೆ.ಇತ್ತ ಭಾಸ್ಕರ್ ಅವರು ಯಾವುದೇ ಚಿಂತೆ ಇಲ್ಲದೆ ಮದುವೆ ಮಾಡಿಸಿದಕ್ಕೆ ಉಡಾಫೆ ಉತ್ತರಗಳನ್ನು ನೀಡಿದ್ದು ಕಾರ್ಯಕರ್ತರನ್ನು ಇನ್ನಷ್ಟು ಕೋಪದ ಕೋಪಕ್ಕೆ ತಳ್ಳಿದಂತಾಗಿದೆ. ಇಲ್ಲಿಗೆ ಈ ವಿಚಾರಕ್ಕೆ ಪೂರ್ಣ ವಿರಾಮ ನೀಡೋಣ, ಯಾಕೆಂದರೆ ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದ್ದು ಯಾವ ಹಂತಕ್ಕೆ ತಲುಪಲಿದೆ ಎಂಬುವುದು ವಿಚಾರಣೆಯ ಬಳಿಕ ಹೊರಬರಲಿದೆ.
ಹಾಗೇ ಇನ್ನೊಂದು ವಿಚಾರವೇನೆಂದರೆ ಭಾಸ್ಕರ್ ಅವರ ಸಹೋದರ ಕೃಷ್ಣ ಡಿ ಅಲಿಯಾಸ್ ಕಿಟ್ಟ ವ್ಯಕ್ತಿಯೊಬ್ಬರಿಗೆ ಗಂಭೀರ ಸ್ವರೂಪದ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ. ಈಗಾಗಲೇ ಮದುವೆಯ ವಿಚಾರದಲ್ಲಿ ಭಾಸ್ಕರ್ ಹೆಸರು ಬಂದಿದ್ದು, ಕೊಲೆ ನಡೆಸಿದ ಆರೋಪಿಯೂ ಭಾಸ್ಕರ್ ಅವರ ಸಹೋದರ ಎಂದು ತಿಳಿಯುತ್ತಲೇ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ ಎಂಬ ಮಾಹಿತಿಯೂ ಇದೆ.
ಸಂಘ-ಸಂಘಟನೆಯ ಹೆಸರಲ್ಲಿ ಪ್ರಚಾರ ಪಡೆದ ವ್ಯಕ್ತಿಯೊಬ್ಬ ಈ ರೀತಿಯ ಜನವಿರೋಧಿ, ಧರ್ಮ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾನೆ ಎಂದರೆ ಏನರ್ಥ!?. ಸದಾ ಹಿಂದೂ ಸಮಾಜಕ್ಕೆ ಒಳಿತು ಮಾಡುವ ಬಜರಂಗದಳ, ವಿಶ್ವ ಹಿಂದೂ ಪರಿಷತ್ ನಂತಹ ಹಿಂದೂ ಪರ ಸಂಘಟನೆಗಳಲ್ಲಿ ಇಂತಹ ಕಟುಕರು ಇದ್ದರೆ ಯಾವ ಕಾರ್ಯಕರ್ತರೂ ಧರ್ಮ ರಕ್ಷಣೆಗೆ ಮುಂದೆ ಬರುವುದಿಲ್ಲ ಎನ್ನುವುದು ಬೇಸತ್ತ ಕಾರ್ಯಕರ್ತರ ವಾದ.
ಅದೇನೇ ಇರಲಿ. ಸದ್ಯ ಕೊಲೆ ನಡೆಸಿದ ಆರೋಪಿಯ ರಕ್ಷಣೆಗೆ ಇದೇ ಭಾಸ್ಕರ್ ಸಹಕರಿಸಿದರೂ ತಪ್ಪಾಗುತ್ತದೆ. ಈಗಾಗಲೇ ತಾಲೂಕಿನಾದ್ಯಂತ ಕೆಂಗಣ್ಣಿಗೆ ಗುರಿಯಾದ ಭಾಸ್ಕರ್ ಧರ್ಮಸ್ಥಳ ಹೇಗೆ ತನ್ನನ್ನು ತಾನು ಎಲ್ಲಾ ಆರೋಪಗಳಿಂದ ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.