ಸಬ್ ರಿಜಿಸ್ಟ್ರರ್ ಆಫೀಸ್ ಸಮಯ ಮತ್ತೆ ಬದಲಾವಣೆ : ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೂ ಕಚೇರಿ ಓಪನ್

Share the Article

ಬೆಂಗಳೂರು : ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಯ ಕರ್ತವ್ಯದ ಅವಧಿಯನ್ನು ಸರಕಾರ ಇತ್ತೀಚೆಗಷ್ಟೇ ಮತ್ತಷ್ಟು ವಿಸ್ತರಿಸಿದೆ. ಇಂದು ಸರಕಾರ ಎರಡನೇ ಸಲ ಸಮಯದ ವಿಸ್ತರಣೆ ಮಾಡಿದ್ದು, ಸಾರ್ವಜನಿಕರಿಗೆ ಉಪಯೋಗವಾಗಿದೆ.

ಮೊದಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿ ಅವಧಿ ಬೆಳಗ್ಗೆ 10 ರಿಂದ ಸಂಜೆ 5.30 ರ ವರೆಗಿತ್ತು. ನಂತರ ಕೆಲಸದ ಸಮಯವನ್ನು ಬೆಳಗ್ಗೆ 9 ರಿಂದ ರಾತ್ರಿ 7 ರವರೆಗೆ ಹಿಗ್ಗಿಸಿತ್ತು. ಇದೀಗ ಮತ್ತೊಂದು ಆದೇಶ ಹೊರಡಿಸಿರುವ ಸರಕಾರ ಕಚೇರಿ ಸಮಯವನ್ನು ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಮಾಡಿದೆ.

Leave A Reply