Home Entertainment ನಿರ್ಮಾಪಕನ ಕಾರಿಗೆ ಹಾಲಿನ ಅಭಿಷೇಕದ ಬದಲಿಗೆ ಮೊಸರಿನ ಅಭಿಷೇಕ ಮಾಡಿದ ಅಭಿಮಾನಿಗಳು!

ನಿರ್ಮಾಪಕನ ಕಾರಿಗೆ ಹಾಲಿನ ಅಭಿಷೇಕದ ಬದಲಿಗೆ ಮೊಸರಿನ ಅಭಿಷೇಕ ಮಾಡಿದ ಅಭಿಮಾನಿಗಳು!

Hindu neighbor gifts plot of land

Hindu neighbour gifts land to Muslim journalist

ಸಿನಿಮಾ ಸ್ಟಾರ್ ಗಳೆಂದರೆ ದೇವರಂತೆ ಕಾಣುವ ಅಭಿಮಾನಿಗಳಿಗೆ ಕಮ್ಮಿ ಇಲ್ಲ ದಕ್ಷಿಣ ಭಾರತದಲ್ಲಿ. ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಆದರಂತೂ ಹೀರೋ ಕಟೌಟ್ ಗೆ ಹಾಲಿ ಅಭಿಷೇಕ ಮಾಡುವುದು ಇದೆಲ್ಲಾ ಅವರ ಅಭಿಮಾನದ ಪರಾಕಾಷ್ಠೆಯನ್ನು ಎದ್ದು ಕಾಣಿಸುತ್ತದೆ. ಅಭಿಮಾನಿಗಳಿಗಂತೂ ಹಬ್ಬದ ವಾತಾವರಣನೇ.

ಆದರೆ ಇಲ್ಲೊಂದು ಅಭಿಮಾನಿಗಳ ಗುಂಪು ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ ಮಾಡಿದ್ದಾರೆ.

ಕಾಲಿವುಡ್ ನ ಖ್ಯಾತ ನಟ ಅಜಿತ್ ಕುಮಾರ್ ಅವರ ಅಭಿಮಾನಿಗಳು ಇಂಥ ಕೆಲಸ ಮಾಡಿದ್ದಾರೆ. ಗುರುವಾರ ಫೆ. 24 ರಂದು ‘ವಲಿಮೈ’ ಸಿನಿಮಾ ಬಿಡುಗಡೆ ಆಗಿದೆ‌. ಜನರ ಪ್ರತಿಕ್ರಿಯೆಯನ್ನು ತಿಳಿಯಲು ಚಿತ್ರಮಂದಿರಕ್ಕೆ ಬಂದಿದ್ದ ಈ ಸಿನಿಮಾದ ನಿರ್ಮಾಪಕ ಬೋನಿ ಕಪೂರ್ ಸಿನಿಮಾ ಮಂದಿರದ ಒಳಗಡೆ ಹೋದಾಗ, ಇತ್ತ ಅಭಿಮಾನಿಗಳು ಬಹಳ‌ ಖುಷಿಯಿಂದ ಬೋನಿಕಪೂರ್ ಕಾರಿಗೆ ಮೊಸರಿನ ಅಭಿಷೇಕ ಮಾಡಿದ್ದಾರೆ. ಇದರಿಂದಾಗಿ ಐಷರಾಮಿ ಕಾರು ಕುಲಗೆಟ್ಟು ಹೋಗಿದೆ. ಹಾಲು ಎಂದು ತಂದು ಪ್ಯಾಕೆಟ್ ಒಡೆದು ನೋಡಿದಾಗ ಗೊತ್ತಾಗಿದ್ದು ಅದು ಹಾಲಲ್ಲ, ಮೊಸರು ಎಂದು.

ಅದೂ ಅಲ್ಲದೇ ಅಭಿಮಾನಿಗಳು ಈ ಮೊಸರನ್ನು ಕದ್ದು ತಂದಿದ್ದಾರೆಂದು ಎಂಬ ಮಾಹಿತಿ ಕೂಡ ಇದೆ. ಹಾಲಿನ ಪ್ಯಾಕೆಟ್ ಬದಲಿಗೆ ಮೊಸರಿನ ಪಾಕೆಟ್ ಗಳನ್ನು ಅಭಿಮಾನಿಗಳು ಕದ್ದು ತಂದಿದ್ದರು.

ಇದರ ಜೊತೆಗೆ ಒಂದು ಭಯಾನಕ ಘಟನೆ ಕೂಡಾ ನಡೆದಿದೆ. ಕೊಯಂಬತ್ತೂರಿನಲ್ಲಿ ಅಜಿತ್ ಅಭಿಮಾನಿಗಳು ‘ ವಲಿಮೈ’ ಸಿನಿಮಾವನ್ನು ನೋಡಲು ಫೆ.24 ರ ಮುಂಜಾನೆಯೇ ಚಿತ್ರಮಂದಿರದ ಬಳಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.