Home ದಕ್ಷಿಣ ಕನ್ನಡ ಬೆಳ್ತಂಗಡಿ: ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯ ಅಸಹಜ ಸಾವು!! ಸಣ್ಣ ಜಗಳ-ಪರಿಚಯಸ್ಥರೇ ನಡೆಸಿದರೇ ಕೊಲೆ!??

ಬೆಳ್ತಂಗಡಿ: ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯ ಅಸಹಜ ಸಾವು!! ಸಣ್ಣ ಜಗಳ-ಪರಿಚಯಸ್ಥರೇ ನಡೆಸಿದರೇ ಕೊಲೆ!??

Hindu neighbor gifts plot of land

Hindu neighbour gifts land to Muslim journalist

ಧರ್ಮಸ್ಥಳ: ಠಾಣಾ ವ್ಯಾಪ್ತಿಯ ಕನ್ಯಾಡಿ ಎಂಬಲ್ಲಿ ವ್ಯಕ್ತಿಯೋರ್ವರು ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ. ಮೃತ ದಿನೇಶ್ ಕುಡಿತದ ಚಟ ಹೊಂದಿದ್ದು ವಿಪರೀತ ಮದ್ಯ ಸೇವಿಸಿ ರಸ್ತೆ ಬದಿ ಬೀಳುತ್ತಿದ್ದರು. ಘಟನೆಯ ದಿನವೂ ವಿಪರೀತ ಕುಡಿದಿದ್ದು ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.

ಸಾವಿನ ಸುತ್ತ ಹಲವು ಅನುಮಾನ!!

ಮೃತ ದಿನೇಶ್ ನಿನ್ನೆಯ ದಿನ ವಿಪರೀತ ಕುಡಿದಿದ್ದು, ಈ ವೇಳೆ ಕೆಲವರೊಂದಿಗೆ ಮಾತಿಗೆ ಮಾತು ಬೆಳೆದಿದೆ. ಇದೇ ಸಂದರ್ಭ ವ್ಯಕ್ತಿಯೊಬ್ಬ ದಿನೇಶ್ ನನ್ನು ಕೆಳಕ್ಕೆ ತಳ್ಳಿದ್ದು ಈ ವೇಳೆ ದಿನೇಶ್ ಗೆ ವಿಪರೀತ ಗಾಯಗಳಾಗಿವೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಕೆಲ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಸಹಜ ಸಾವು-ಕೊಲೆಯೋ ಎಂಬ ಅನುಮಾನದ ಮುಳ್ಳೊಂದು ಸಾವಿನ ಸುತ್ತ ತಿರುಗುತ್ತಿದೆ.