ಬೆಳ್ತಂಗಡಿ: ಹಿಂದೂ ಯುವತಿ-ಮುಸ್ಲಿಂ ಯುವಕ ದೇವಾಲಯವೊಂದರಲ್ಲಿ ಮದುವೆ!! ತಡವಾಗಿ ಬೆಳಕಿಗೆ ಬಂದ ಪ್ರಕರಣ-ಹಿಂದೂ ಸಂಘಟನೆಗಳಿಂದ ಆಕ್ರೋಶ

Share the Article

ಬೆಳ್ತಂಗಡಿ: ಇಲ್ಲಿನ ನಡ ಗ್ರಾಮದ ಕುತ್ರೊಟ್ಟು ಎಂಬಲ್ಲಿನ ಸತ್ಯನಾರಾಯಣ ದೇವಾಲಯದಲ್ಲಿ ಸ್ಥಳೀಯ ಹಿಂದೂ ಯುವತಿಯೊಬ್ಬಳ ವಿವಾಹವು ಉಡುಪಿ ಜಿಲ್ಲೆಯ ಮುಸ್ಲಿಂ ಯುವಕನೊಂದಿಗೆ ನಡೆದ ಬಗ್ಗೆ ವರದಿಯಾಗಿದ್ದು, ತಡವಾಗಿ ಬೆಳಕಿಗೆ ಬಂದ ವಿಷಯ ತಿಳಿದ ಕೂಡಲೇ ಹಿಂದೂ ಸಂಘಟನೆಗಳು ಘಟನೆಯ ಬಗ್ಗೆ ಕಿಡಿಕಾರಿದೆ. ಅಲ್ಲದೇ ಅನ್ಯ ಕೋಮಿನ ವಿವಾಹ ಮಾಡಿಸಿ ಸಾಮರಸ್ಯಕ್ಕೆ ಧಕ್ಕೆ ತಂದ ಬಗ್ಗೆ ನಗರ ಠಾಣೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಪ್ರಕರಣವನ್ನು ದಾಖಲಿಸಿದೆ.

ಇಲ್ಲಿನ ದೇವಾಲಯದಲ್ಲಿ ಸ್ಥಳೀಯ ಯುವತಿಯೊಬ್ಬಳು ಉಡುಪಿ ಬೈಂದೂರು ತಾಲೂಕಿನ ಸಫ್ವಾನ್ ಎಂಬವನೊಂದಿಗೆ ವಿವಾಹವಾದ ಬಗ್ಗೆ ಫೆಬ್ರವರಿ 21 ರಂದು ಸುದ್ದಿಯಾಗಿದ್ದು,ದೇವಾಲಯದಲ್ಲಿ ಸಾಮರಸ್ಯ ಕದಡಿದ ಬಗ್ಗೆ ತೀವ್ರ ಆಕ್ರೋಶವು ವ್ಯಕ್ತವಾಗಿದೆ.

ಸದ್ಯ ರಾಜ್ಯದೆಲ್ಲೆಡೆ ಹಿಜಾಬ್ ವಿಚಾರವಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ಇಂತಹ ಕೃತ್ಯವೂ ನಡೆದಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎನ್ನುವುದು ಒಂದೆಡೆಯಾದರೆ,ಲವ್ ಜಿಹಾದ್ ನ ಇನ್ನೊಂದು ರೂಪ ಇದಾಗಿದೆ ಎನ್ನುವುದು ಇನ್ನೊಂದು ವಾದ.ಪ್ರಕರಣದಲ್ಲಿ ಸತ್ಯಾ ಸತ್ಯತೆ ತನಿಖೆಯ ಬಳಿಕ ಹೊರಬರಬೇಕಿದೆ.

Leave A Reply