ಬ್ಯಾಂಕ್ ಗ್ರಾಹಕರೇ ಗಮನಿಸಿ : ‘ ‘ಡ್ಯಾಮೇಜ್ ನೋಟ್’ ಬದಲಾಯಿಸಲು ಹೊಸ ನಿಯಮ ಜಾರಿಗೊಳಿಸಿದ RBI
ನವದೆಹಲಿ : ಹರಿದ ಅಥವಾ ಟೇಪ್ ಅಂಟಿಸಿದ ನೋಟು ಇದ್ದರೆ ಈ ನೋಟನ್ನು ನೀವು ಎಲ್ಲಿಯೂ ನೀಡಲು ಸಾಧ್ಯವಾಗುವುದಿಲ್ಲ. ಅಂಗಡಿಯವರು ಕೂಡಾ ಇದನ್ನು ತೆಗೆದುಕೊಳ್ಳಲು ತಗಾದೆ ಮಾಡುತ್ತಾರೆ. ಈಗ ಈ ನೋಟ್ ಬದಲಿಗೆ ನೀವು ಸರಿಯಾದ ನೋಟ್ ನ್ನು ಪಡೆಯಬಹುದು. ಈ ಟೇಪ್ ಅಂಟಿಸಿದ ನೋಟ್ ನ್ನು ಬದಲಿಸಲು ಆರ್ ಬಿಐ ನಿಯಮಗಳನ್ನು ಮಾಡಿದೆ. ಈ ನಿಯಮಗಳ ಪ್ರಕಾರ, ನೀವು ಈ ನೋಟುಗಳನ್ನು ಹೇಗೆ ವಿನಿಮಯ ಮಾಡಿಕೊಳ್ಳಬಹುದು ಮತ್ತು ಸಂಪೂರ್ಣ ಹಣವನ್ನು ಹೇಗೆ ಮರಳಿ ಪಡೆಯಬಹುದು ಹಾಗೂ ಈ ಟೇಪ್ ಅಂಟಿಸಿದ ನೋಟನ್ನು ಹೇಗೆ ಕಾನೂನುಬದ್ಧಗೊಳಿಸಬಹುದು ಎಂಬುದನ್ನು ತಿಳಿಸಿದೆ.
ಬ್ಯಾಂಕ್ ನಿಯಮ : ಭಾರತೀಯ ರಿಸರ್ವ್ ಬ್ಯಾಂಕ್ ( RBI) 2017 ರ ವಿನಿಮಯದ ಕರೆನ್ಸಿ ನೋಟು ನಿಯಮಗಳ ಪ್ರಕಾರ, ಎಟಿಎಂನಿಂದ ವಿಕೃತ ನೋಟುಗಳನ್ನು ಪಡೆದರೆ, ನೀವು ಅವುಗಳನ್ನು ಬ್ಯಾಂಕ್ ಗಳಲ್ಲಿ ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು. ಯಾವುದೇ ಸರಕಾರಿ ಬ್ಯಾಂಕ್ ಗಳು ( ಪಿಎಸ್ ಬಿ) ನೋಟುಗಳನ್ನು ಬದಲಿಸಲು ನಿರಾಕರಿಸುವಂತಿಲ್ಲ. ಅಂತಹ ನೋಟುಗಳನ್ನು ತೆಗೆದುಕೊಳ್ಳಲು ಬ್ಯಾಂಕುಗಳು ನಿರಾಕರಣೆ ಮಾಡುವಂತಿಲ್ಲ.
ನೋಟ್ ಬದಲಾಯಿಸುವ ನಿಯಮ :
ನಿಮ್ಮ ನೋಟು ತುಂಡು ತುಂಡಾದರೂ ಬ್ಯಾಂಕ್ ಅದನ್ನು ಬದಲಾಯಿಸುತ್ತದೆ. ಹರಿದ ನೋಟಿನ ಯಾವುದೇ ಭಾಗ ಕಾಣೆಯಾದರೂ ಅದನ್ನು ಬದಲಾವಣೆಮಾಡಿಕೊಳ್ಳಬಹುದು. ಇದಕ್ಕಾಗಿ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ, ನೀವು ಸರಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್ ಅಥವಾ ಆರ್ ಬಿಐ ಯ ಇಶ್ಯೂ ಆಫೀಸ್ ಗೆ ಹೋಗುವ ಮೂಲಕ ಕರೆನ್ಸಿ ಚೆಸ್ಟ್ ನ್ನು ಬದಲಾಯಿಸಬಹುದು.
ನೀವು ನೀಡಿದ ಹಣದ ಪೂರ್ಣಮೊತ್ತವನ್ನು ಪಡೆಯಬಹುದೋ ಅಥವಾ ಇಲ್ಲವೋ ಎಂಬುದನ್ನು ನಿಮ್ಮ ನೋಟಿನ ಸ್ಥಿತಿಗತಿಯ ಮೇಲೆ ಅವಲಂಬಿತವಾಗಿದೆ. ಕೆಲವು ಮ್ಯುಟಿಲೇಟೆಡ್ ನೋಟುಗಳ ಸಂದರ್ಭದಲ್ಲಿ, ಪೂರ್ಣ ಹಣ ಲಭ್ಯವಿರುತ್ತದೆ. ಆದರೆ ನೋಟು ಹೆಚ್ಚು ಹರಿದಿದ್ದರೆ ನೀವು ಶೇಕಡಾವಾರು ಹಣವನ್ನು ಮರಳಿ ಪಡೆಯುತ್ತೀರಿ. ಉದಾಹರಣೆಗೆ : 50 ರೂಪಾಯಿಗಿಂತ ಕಡಿಮೆ ಮೌಲ್ಯದ ನೋಟಿನ ದೊಡ್ಡ ತುಂಡು ಸಾಮಾನ್ಯ ನೋಟಿನ ಶೇ.50 ಕ್ಕಿಂತ ಹೆಚ್ಚಿದ್ದರೆ, ಈ ನೋಟಿನ ವಿನಿಮಯದ ನಂತರ ಅದರ ಸಂಪೂರ್ಣ ಮೌಲ್ಯವನ್ನು ಕಂಡುಹಿಡಿಯಲಾಗುತ್ತದೆ. ರೂ.50 ಕ್ಕಿಂತ ಹೆಚ್ಚು ಮೌಲ್ಯದ ನೋಟಿನ ದೊಡ್ಡ ತುಂಡು ಸಾಮಾನ್ಯ ನೋಟಿಗಿಂತ 80 ಪ್ರತಿಶತ ಅಥವಾ ಹೆಚ್ಚಿನದಾಗಿದ್ದರೆ, ಈ ನೋಟಿನ ವಿನಿಮಯದ ನಂತರ ನೀವು ಸಂಪೂರ್ಣ ಮೌಲ್ಯ ಲಭಿಸುತ್ತದೆ.
50 ರೂ ಗಿಂತ ಹೆಚ್ಚಿನ ಮೌಲ್ಯದ ನೋಟಿನ ದೊಡ್ಡ ತುಂಡು ಸಾಮಾನ್ಯ ನೋಟಿನ 40 ರಿಂದ 80 ಪ್ರತಿಶತದಷ್ಟು ಇದ್ದರೆ, ನೀವು ಆ ನೋಟಿನ ಅರ್ಧದಷ್ಟು ಮೌಲ್ಯ ಲಭಿಸುತ್ತದೆ. 50 ರೂ. ಗಿಂತ ಹೆಚ್ಚಿನ ಮೌಲ್ಯದ ಒಂದೇ ನೋಟಿನ ಎರಡು ತುಂಡುಗಳಿದ್ದರೆ ಮತ್ತು ಈ ಎರಡು ತುಂಡುಗಳು ಸಾಮಾನ್ಯ ನೋಟಿನ ಶೇ.40 ರಷ್ಟಿದ್ದರೆ, ನೀವು ನೋಟಿನ ಪೂರ್ಣ ಮೌಲ್ಯಕ್ಕೆ ಸಮಾನವಾದ ಮೌಲ್ಯವನ್ನು ಪಡೆಯುತ್ತೀರಿ. ರೂ. 1 , ರೂ.2, ರೂ. 5, ರೂ. 10 ಮತ್ತು ರೂ.20 ನೋಟುಗಳ ವಿನಿಮಯದ ನಂತರ ಸಂಪೂರ್ಣ ಹಣ ದೊರಕುತ್ತದೆ.
ಹಳತಾದ, ಹರಿದ, ತೇಪೆ ಹಾಕಿದ, ವಿಕೃತವಾದ ನೋಟನ್ನು ವಿನಿಮಯ ಮಾಡಿಕೊಳ್ಳಲು ಯಾವುದೇ ಬ್ಯಾಂಕ್ ನಿರಾಕರಿಸಿದರೆ ನೀವು ಸಾಮಾನ್ಯ ಬ್ಯಾಂಕಿಂಗ್ / ನಗದು ಸಂಬಂಧಿತ ವರ್ಗದ ಅಡಿಯಲ್ಲಿ https://crcf.sbi.co.in/ccf/ ನಲ್ಲಿ ದೂರು ನೀಡಬಹುದು.
ಈ ಲಿಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ.
ಎಟಿಎಂಗಳಿಂದ ದೊರೆತ ವಿಕೃತ ನೋಟುಗಳನ್ನು ಬದಲಾಯಿಸಲು ಯಾವುದೇ ಬ್ಯಾಂಕ್ ಬದಲಾಯಿಸಲು ನಿರಾಕರಿಸುವುದಿಲ್ಲ. ಆದರೂ ಬ್ಯಾಂಕ್ ಗಳು ನಿಯಮಗಳನ್ನು ಉಲ್ಲಂಘಿಸಿದರೆ, ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು. ಗ್ರಾಹಕರು ಒಂದು ವೇಳೆ ದೂರು ದಾಖಲಿಸಿದರೆ ದೂರಿನ ಆಧಾರದ ಮೇಲೆ 10 ಸಾವಿರದವರೆಗೆ ಹಾನಿಯನ್ನು ಪಾವತಿಸಬೇಕಾಗಬಹುದು.