Home latest ಹೆತ್ತ ತಂದೆಯಿಂದಲೇ ಮಗಳ ಕೊಲೆ, ನಂತರ ಆಕೆಯ ಶವದ ಮೇಲೆ ಅತ್ಯಾಚಾರ | ಇಡೀ ಸಮಾಜವೇ...

ಹೆತ್ತ ತಂದೆಯಿಂದಲೇ ಮಗಳ ಕೊಲೆ, ನಂತರ ಆಕೆಯ ಶವದ ಮೇಲೆ ಅತ್ಯಾಚಾರ | ಇಡೀ ಸಮಾಜವೇ ತಲೆ ತಗ್ಗಿಸುವ ಪೈಶಾಚಿಕ ಕೃತ್ಯ

Hindu neighbor gifts plot of land

Hindu neighbour gifts land to Muslim journalist

‘ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಂದೆ ತಾಯಿ ಇರಲಿಕ್ಕಿಲ್ಲ’ ಅಂತಾರೆ. ಆದರೆ ಕೆಲವೊಂದು ಘಟನೆಗಳು ಈ ಮಾತನ್ನು ಸುಳ್ಳು ಮಾಡುತ್ತದೆ. ಅದರಲ್ಲೂ ತಂದೆ ಮಕ್ಕಳ ಪಾಲಿಗೆ ಯಾವಾಗಲೂ ರಕ್ಷಕನೇ. ಎಲ್ಲಾ ಕಷ್ಟ ಸಹಿಸಿ ನನ್ನ ಮಕ್ಕಳಿಗೆ ಏನೂ ಆಗಬಾರದೆಂದು ತಂದೆ ಯಾವಾಗಲೂ ಯೋಚನೆ ಮಾಡುತ್ತಾನೆ. ಅಂತಹ ತಂದೆ ತಾನೇ ಬೆಳೆಸಿದ ತನ್ನ ಕಂದನ ಮೇಲೆಯೇ ಅತ್ಯಾಚಾರ ಮಾಡಿ ಆಕೆಯ ಪ್ರಾಣ ಹೋದರೂ ಕಂದಮ್ಮನ ಶವದ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಘಟನೆ ತಿಳಿದ ಜನರೇ ಬೆಚ್ಚಿಬಿದ್ದಿದ್ದಾರೆ.

ಮಧ್ಯಪ್ರದೇಶ ರಾಜ್ಯದ ಗುನಾ ಜಿಲ್ಲೆಯ ಗ್ರಾಮವೊಂದರಲ್ಲಿ ಇಂಥದ್ದೊಂದು ಆಘಾತಕಾರಿ ಹಾಗೂ ಇಡೀ ಮಾನವ ಸಮಾಜವೇ ತಲೆ ತಗ್ಗಿಸುವ ಪೈಶಾಚಿಕ ಕೃತ್ಯವೊಂದು ನಡೆದಿದೆ.

ಬಜರಂಗಗಡ ಪೊಲೀಸ್ ಠಾಣೆ ವ್ಯಾಪ್ತಿಯ ಜೈತಾ ಡೊಂಗರ್ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. 40 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ವಿಕಲಚೇತನನಾಗಿದ್ದು, ತನ್ನ‌ 14 ವರ್ಷದ ಮಗಳನ್ನು ಕೊಂದು, ಬಳಿಕ ಆಕೆಯ ಶವದ ಮೇಲೆ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.

2 ದಿನಗಳ ಹಿಂದೆ ಪೊಲೀಸ್ ಠಾಣೆಗೆ ತೆರಳಿದ್ದ ಈ ವ್ಯಕ್ತಿ ತನ್ನ 14 ವರ್ಷದ ಮಗಳು ಮನೆಯಿಂದ ಕಾಣೆಯಾಗಿದ್ದಾಳೆ ಆಕೆಯನ್ನು ಹುಡುಕಿ ಕೊಡಿ ಅಂತ ದೂರು ಕೊಟ್ಟಿದ್ದಾನೆ. ನಂತರ ಪೊಲೀಸರು ಬಾಲಕಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

ಬಾಲಕಿಯ ಶವ ಗ್ರಾಮದ ಹತ್ತಿರದ ಅರಣ್ಯದಲ್ಲಿ ಬಿದ್ದಿರುವುದು ತಿಳಿಯುತ್ತದೆ. ಪೋಸ್ಟ್ ಮಾರ್ಟಮ್ ಮಾಡಿದಾಗ ರೇಪ್ ಆಗಿರುವುದು ತಿಳಿಯುತ್ತದೆ. ನಂತರ ಪ್ರಕರಣದ ಬಗ್ಗೆ ಮನೆಯವರನ್ನೆಲ್ಲಾ ವಿಚಾರಿಸಿದಾಗ ಕಾಣೆಯಾಗಿರೋ ಹಿಂದಿನ ದಿನ ಮಗಳ ಜೊತೆ ಅಪ್ಪ ತೆರಳಿದ್ದ ಬಗ್ಗೆ ಅಕ್ಕಪಕ್ಕದ ಜನರು ಮಾಹಿತಿ ನೀಡುತ್ತಾರೆ.

ನಂತರ ತಂದೆಯನ್ನು ಠಾಣೆಗೆ ವಿಚಾರಿಸಿ ವಿಚಾರಣೆ ನಡೆಸಿದಾಗ ಸತ್ಯ ಹೊರಬರುತ್ತದೆ. ಮನೆಯಲ್ಲಿ ಬೇರೆ ಸದಸ್ಯರಿದ್ದು, ಅತ್ಯಾಚಾರ ಮಾಡುವ ಉದ್ದೇಶಕ್ಕಾಗಿ ಅರಣ್ಯಕ್ಕೆ ಕರೆದೊಯ್ದೆ. ಆದರೆ ಆಕೆ ಅಲ್ಲಿ ತಪ್ಪಿಸಿಕೊಂಡು ಮನೆಯವರಿಗೆ ಹೇಳುವುದಾಗಿ ಬೆದರಿಸಿದಳು. ಆಗ ಏನೂ ಮಾಡಲು ತೋಚದೆ ಮಗಳನ್ನು ಕೊಂದೆ. ನಂತರ ಆಕೆಯ ಶವದ ಮೇಲೆ ರೇಪ್ ಮಾಡಿದೆ ಅಂತ ಆಘಾತಕಾರಿ ಮಾಹಿತಿ ನೀಡಿದ್ದಾನೆ.

ಮಗಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.