ಮಗನ ಪ್ರೀತಿಗೆ ತಂದೆಯೇ ವಿಲನ್!! ಸೊಸೆಯಾಗಿ ಬರುವ ಯುವತಿಗೆ ಧಮ್ಕಿ -ಖಾಸಗಿ ಕ್ಷಣಗಳ ಫೋಟೋ ಚಿತ್ರೀಕರಣ

Share the Article

ಬೆಂಗಳೂರು: ಮಕ್ಕಳು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿದ ಕೂಡಲೇ ಹೆತ್ತವರು ಒಂದು ಕ್ಷಣ ಕೋಪಗೊಳ್ಳುವುದು ಮಾಮೂಲು. ಆ ಬಳಿಕ ಮಕ್ಕಳ ಮೇಲಿನ ಮಮಕಾರದಿಂದ ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಸೂಚಿಸುತ್ತಾರೆ.

ಆದರೆ ಇಲ್ಲೊಂದು ಘಟನೆಯಲ್ಲಿ ಯುವಕನ ತಂದೆಯೇ ಲವ್ ಸ್ಟೋರಿ ಗೆ ವಿಲನ್ ಆಗಿ ಕಾಡಿದ್ದು, ರೌಡಿ ಶೀಟರ್ ಒಬ್ಬನಿಗೆ ಆಕೆಯನ್ನು ಮುಗಿಸಲು ಸುಪಾರಿ ಕೊಟ್ಟದಲ್ಲದೇ, ಆಕೆಯ ಖಾಸಗಿ ಕ್ಷಣಗಳನ್ನು ಸೆರೆಹಿಡಿದ್ದಾನೆ.ಸದ್ಯ ರೌಡಿ ಶೀಟರ್ ನನ್ನು ಅರೆಸ್ಟ್ ಮಾಡಲಾಗಿದ್ದು, ಯುವಕನ ತಂದೆಯ ವಿಚಾರಣೆಯೂ ಮುಂದುವರಿದಿದೆ.

ಘಟನೆ ವಿವರ: ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ತಂದೆಯೊಬ್ಬ ತನ್ನ ಮಗನ ಲವರ್ ಗೆ ಧಮ್ಕಿ ಹಾಕಿಸಿದ್ದಾನೆ. ಯುವತಿಯು ಹೊರ ರಾಜ್ಯದವಳಾಗಿದ್ದು, ಎಲ್ಲಿ ತನ್ನ ಮನೆ ಮರ್ಯಾದಿ ಹೋಗುತ್ತದೆ ಎಂಬ ಭಯದಿಂದ ಈ ರೀತಿಯ ನೀಚ ಕೆಲಸಕ್ಕೆ ಇಳಿದು ಪೊಲೀಸರ ಅತಿಥಿಯಾಗಿದ್ದಾನೆ.

ಪರಸ್ಪರ ಪ್ರೀತಿಸುತ್ತಿದ್ದ ಯುವಕ ಹಾಗೂ ಆತನ ಪ್ರೇಯಸಿ ಹೊರ ರಾಜ್ಯದ ಯುವತಿಯು ಜೀವನದುದ್ದಕ್ಕೂ ಜೊತೆಯಾಗಿಯೇ ಬಾಳುವ ಕನಸು ಇಟ್ಟುಕೊಂಡಿದ್ದರು. ಅದಾಗಲೇ ವಿಷಯ ಹುಡುಗನ ತಂದೆಯ ಕಿವಿಗೆ ಬಿದ್ದಿದ್ದು ಎಲ್ಲಿ ತನ್ನ ಮಗ ಕೈತಪ್ಪಿ ಹೋಗುತ್ತಾನೆ ಎಂದು ಯುವತಿಗೆ ರೌಡಿ ಶೀಟರ್ ನಂದೀಶ ನಿಂದ ಧಮ್ಕಿ ಹಾಕಿಸಿದ್ದಾನೆ.

ಸದ್ಯ ಆರೋಪಿ ನಂದೀಶ ಹಾಗೂ ಯುವಕನ ತಂದೆಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದೂ, ಯುವತಿಯ ಖಾಸಗಿ ಕ್ಷಣಗಳನ್ನು ಚಿತ್ರೀಸಿದ ಆರೋಪವೂ ಕೇಳಿ ಬಂದಿದೆ.

Leave A Reply