Home Breaking Entertainment News Kannada “ಲವ್” ಪದಕ್ಕೂ ನನಗೂ ಆಗಿ ಬರುತ್ತಿಲ್ಲ, ಹಾಗಾಗಿ ಅದರಿಂದ ದೂರ ಉಳಿಯುತ್ತೇನೆ ಎಂದ ಡಿಂಪಲ್ ಕ್ವೀನ್...

“ಲವ್” ಪದಕ್ಕೂ ನನಗೂ ಆಗಿ ಬರುತ್ತಿಲ್ಲ, ಹಾಗಾಗಿ ಅದರಿಂದ ದೂರ ಉಳಿಯುತ್ತೇನೆ ಎಂದ ಡಿಂಪಲ್ ಕ್ವೀನ್ !! | ನಟಿ ರಚಿತಾ ರಾಮ್ ಹೀಗೆನ್ನಲು ಕಾರಣ??

Hindu neighbor gifts plot of land

Hindu neighbour gifts land to Muslim journalist

ಸ್ಯಾಂಡಲ್ ವುಡ್ ನ ಗುಳಿಕೆನ್ನೆಯ ಚೆಲುವೆ ನಟಿ ರಚಿತಾ ರಾಮ್.‌ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಇತ್ತೀಚೆಗೆ ಕೆಲವು ಸಿನಿಮಾಗಳ ಪಾತ್ರಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು.

ಒಂದೇ ರೀತಿಯ ಪಾತ್ರಗಳಲ್ಲಿ ನಟಿಸುತ್ತಿರುವ ರಚಿತಾ ಕಂಫರ್ಟ್ ಝೋನ್ ನಿಂದ ಹೊರ ಬರಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಬರೀ ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಕಾರಣ ನೆಟ್ಟಿಗರ ಟ್ರೋಲ್ ಗೆ ಆಹಾರವಾಗುತ್ತಿದ್ದಾರೆ. ಐ ಲವ್ ಯೂ ಸಿನಿಮಾದಿಂದ ಇದೆಲ್ಲ ಪ್ರಾರಂಭವಾಯಿತು. ಲವ್ ಯೂ ರಚ್ಚು ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ಚರ್ಚೆ ನಡೆಯಿತು. ಇದರ ಜೊತೆಗೆ ಫೆಬ್ರವರಿ 24 ರಂದು ರಿಲೀಸ್ ಆಗುತ್ತಿರುವ ಏಕ್ ಲವ್ ಯಾ ಸಿನಿಮಾದಲ್ಲಿಯೂ ರಚಿತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಏಕ್ ಲವ್ ಯಾ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ರಿಲೀಸ್ ಆಗಿದ್ದು, ಅದರಲ್ಲಿ ರಚಿತಾ ಸ್ಮೋಕಿಂಗ್ ಮತ್ತು ಡ್ರಿಂಕಿಂಗ್ ದೃಶ್ಯ ಹಾಗೂ ಸಹನಟ ರಾಣಾ ಜೊತೆ ಕಿಸ್ ಮಾಡುವ ಸನ್ನಿವೇಶಗಳು ಎಲ್ಲರ ಗಮನ ಕೇಂದ್ರೀಕರಿಸಿವೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ರಚಿತಾ , “ಪುಷ್ಪಕ ವಿಮಾನ, ಆಯುಷ್ಮಾನ್ ಭವ, ಮತ್ತು 100 ನಂತಹ ಚಲನಚಿತ್ರಗಳು ಸಹ ನಾನು ನಿರ್ವಹಿಸಿದ ಪಾತ್ರಗಳಿಗಾಗಿ ನಾನು ಮೆಚ್ಚುಗೆ ಪಡೆದಿದ್ದೇನೆ ಎಂದಿದ್ದಾರೆ.
ತಮ್ಮ ವೃತ್ತಿ ಜೀವನ ಸ್ಟಿರಿಯೋ ಟೈಪ್ ಆಗಲು ಬಿಡುವುದಿಲ್ಲ, ನನ್ನ ಪ್ರತಿಭೆಯನ್ನು ಹೊರಗೆ ತರುವಂತಹ ಸಿನಿಮಾಗಳಲ್ಲಿ ನಟಿಸಲು ನಾನು ಬಯಸುತ್ತಿದ್ದೇನೆ, ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಆದರೆ ಇನ್ನು ಮುಂದೆ ವಿಷಯಾಧಾರಿತ ಸಿನಿಮಾಗಳ ಬಗ್ಗೆ ಗಮನ ಹರಿಸುತ್ತೇನೆ. ಆಯುಷ್ಮಾನ್ ಭವ, ಪುಷ್ಪಕ ವಿಮಾನ ಮತ್ತು 100 ಹಾಗೂ ಅಯೋಗ್ಯ ಸಿನಿಮಾಗಳನ್ನು ನಾನು ಆರಿಸಿಕೊಂಡೆ” ಎಂದು ರಚಿತಾ ತಿಳಿಸಿದ್ದಾರೆ.

ಲವ್ ಟೈಟಲ್ ನಿಂದ ಕೂಡಿರುವ ಸಿನಿಮಾಗಳಿಂದ ದೂರುವಿರುವುದು ಉತ್ತಮ ಎಂದು ತಮ್ಮ ಹಾಸ್ಯದಿಂದ ಕೂಡಿದ ಭಾಷೆಯಲ್ಲಿ ಉತ್ತರಿಸಿದ್ದಾರೆ. ಸದ್ಯ ರಚಿತಾ ದೀಪಕ್ ಗಂಗಾಧರ್ ನಿರ್ದೇಶನದ ಲವ್ ಮಿ ಆರ್ ಹೇಟ್ ಮಿ ಸಿನಿಮಾಗೆ ಸಹಿ ಮಾಡಿದ್ದಾರೆ. ಇನ್ನು ಮುಂದೆ ಸಿನಿಮಾಗಳಿಗೆ ಸಹಿ ಮಾಡುವಾಗ ಚಿತ್ರದ ಟೈಟಲ್ ನಲ್ಲಿ ಲವ್ ಎಂಬ ಪದ ಇಲ್ಲದ ಕಥೆಗಳನ್ನು ಒಪ್ಪಿಕೊಳ್ಳುತ್ತೇನೆ, ಏಕೆಂದರೇ ಲವ್ ನನಗೆ ವರ್ಕೌಟ್ ಆಗುವುದಿಲ್ಲ ಎಂದು ಹೇಳಿದ್ದಾರೆ.

ಏಕ್ ಲವ್ ಯಾ ಸಿನಿಮಾದಲ್ಲಿ ಸ್ಮೋಕಿಂಗ್ , ಡ್ರಿಂಕಿಂಗ್ ಮತ್ತು ರೋಮ್ಯಾಂಟಿಕ್ ಸೀನ್ ಗಳಲ್ಲಿ ಕಾಣಸಿಕೊಂಡಿದ್ದು, ಪಾತ್ರಕ್ಕೆ ಅದು ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ನಾನು ಏನೇ ಮಾಡಿದ್ದರೂ ಅದು ಸಿನಮಾಗಾಗಿ ಮಾತ್ರ. ನಾವು ಪ್ರಚಾರಕ್ಕಾಗಿ ಮಾಡುತ್ತಿಲ್ಲ, ಬೋಲ್ಡ್ ಅಂಡ್ ಬ್ರೇವ್ ನಾಯಕಿ ಎಂಬ ಟ್ಯಾಗ್ಸೇರಿಕೊಂಡಿದೆ ಎಂದು ರಚಿತಾ ಬೇಸರ ವ್ಯಕ್ತ ಪಡಿಸಿದ್ದಾರೆ.