ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ!! ಸವಾರ ಸ್ಥಳದಲ್ಲೇ ಸಾವು-ಸಾಹಸವಾರ ಗಂಭೀರ

Share the Article

ಮೈಸೂರು: ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಸಾಹಸವಾರ ಗಂಭೀರ ಗಾಯಗೊಂಡ ಘಟನೆಯು ಜಿಲ್ಲೆಯ ವಿಜಯನಗರದಲ್ಲಿ ನಡೆದಿದೆ.

ಮೃತ ಸವಾರನನ್ನು ಹುಣಸೂರು ತಾಲೂಕಿನ ಮುತ್ತುರಾಯನ ಹೊಸಳ್ಳಿ ನಿವಾಸಿ ಅನಂತು(35) ಎಂದು ಗುರುತಿಸಲಾಗಿದ್ದು ಗಾಯಳು ಕೃಷ್ಣೆಗೌಡ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿಂಗ್ ರೋಡ್ ಕಡೆಯಿಂದ ವಿಜಯನಗರ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನವು ಮೈಸೂರಿನ ಕಡೆಗೆ ಬರುತ್ತಿದ್ದ ಸವಾರರು ಸಂಚರಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ ಎನ್ನಲಾಗಿದೆ.ಸದ್ಯ ವಿವಿ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply