Home ದಕ್ಷಿಣ ಕನ್ನಡ ಮಂಗಳೂರು: ಕಳ್ಳನನ್ನು ಹಿಡಿಯಲು ಬೆನ್ನಟ್ಟಿದ ಪೊಲೀಸ್ ಪೇದೆಗೆ ಚೂರಿ ಇರಿತ!! ಕಿಡಿಗೇಡಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದ

ಮಂಗಳೂರು: ಕಳ್ಳನನ್ನು ಹಿಡಿಯಲು ಬೆನ್ನಟ್ಟಿದ ಪೊಲೀಸ್ ಪೇದೆಗೆ ಚೂರಿ ಇರಿತ!! ಕಿಡಿಗೇಡಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಕಳ್ಳನನ್ನು ಹಿಡಿಯಲು ಮುಂದಾದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕಳ್ಳ ಚೂರಿ ಇರಿದು ಪರಾರಿಯಾದ ಘಟನೆಯು ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ಸಿಬ್ಬಂದಿಯನ್ನು ಬಂದರು ಠಾಣಾ ಹೆಡ್ ಕಾನ್ಸ್ಟೇಬಲ್ ವಿನೋದ್ ಎಂದು ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಯೇನಪೋಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಸೆಂಟ್ರಲ್ ಮಾರ್ಕೆಟ್ ಬಳಿಯ ಅಂಗಡಿಯೊಂದಕ್ಕೆ ಕಳ್ಳನೊಬ್ಬ ದುಬಾರಿ ಬೆಲೆಯ ವಾಚ್ ಮಾರಾಟ ಮಾಡಲು ಬಂದಿದ್ದು ಈ ವೇಳೆ ಅನುಮಾನಗೊಂಡ ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಬಂದರು ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿದ್ದು ಪೊಲೀಸರನ್ನು ಕಂಡ ಕಳ್ಳ ಗಲಿಬಿಲಿಗೊಂಡಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ಪೇದೆ ವಿನೋದ್ ಅವರಿಗೆ ಚೂರಿಯಿಂದ ಇರಿದಿದ್ದಾನೆ. ಸದ್ಯ ಪೇದೆಯು ಆಸ್ಪತ್ರೆಯಲ್ಲಿ ಚೇತರಿಕೊಳ್ಳುತ್ತಿದ್ದೂ, ಆರೋಪಿಯು ಕಾಸರಗೋಡು ಮುಲದವನೆಂಬ ಮಾಹಿತಿಯ ಆಧಾರದಲ್ಲಿ ಪತ್ತೆಗೆ ಬಲೆ ಬೀಸಲಾಗಿದೆ.

ಘಟನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ಕೋಮು ವಾದ ಪ್ರಾರಂಭಿಸಿದ್ದು ಯಾರೂ ಇಂಥ ಮಾತುಗಳಿಗೆ ಕಿವಿಕೊಡಬಾರದು ಎಂದು ಪೊಲೀಸ್ ಮೂಲಗಳು ಮನವಿ ಮಾಡಿದೆ.