ಬಜರಂಗದಳ ಕಾರ್ಯಕರ್ತ ಹರ್ಷ ಮರ್ಡರ್ ಕೇಸಿನಲ್ಲಿ ಹಿಂದೂಗಳ ಹೆಸರು!! ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮಾಧ್ಯಮವೊಂದರ ವರದಿ!!

Share the Article

ಮಂಗಳೂರು: ಹರ್ಷ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಸುದ್ದಿಯನ್ನು ಬಿತ್ತರಿಸಿದ ವೆಬ್ ಸೈಟ್ ಮಾಧ್ಯಮವೊಂದರ ವರದಿಯನ್ನು ತಿರುಚಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಬಗ್ಗೆ ವರದಿಯಾಗಿದೆ.

ಅಸಲಿಗೆ ಮಾಧ್ಯಮವು ಬಿತ್ತರಿಸಿದ ವರದಿ

ಸೋಮವಾರ ಮಧ್ಯಾಹ್ನ ಈ ವಿಚಾರ ಬೆಳಕಿಗೆ ಬಂದಿದ್ದು ಇಬ್ಬರು ಹಿಂದೂಗಳ ಹೆಸರನ್ನು ಸೇರಿಸಿ ಅದೇ ನ್ಯೂಸ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಜನರನ್ನು ನಂಬಿಸಿಲಾಗಿದೆ ಎಂದು ತಿಳಿದು ಬಂದಿದೆ. ವಿಚಾರ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಮಾಧ್ಯಮ ಸಂಸ್ಥೆಯು ಸುಳ್ಳು ಸುದ್ದಿ ಹಬ್ಬಿಸಿದವರ ಬಗ್ಗೆ ಪೊಲೀಸರ ಮೊರೆ ಹೋಗಲು ಮುಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಸಲಿ-ನಕಲಿಯ ಬಗ್ಗೆ ಅರಿವು ಮೂಡಿಸುತ್ತಿದೆ.

ಕಿಡಿಗೇಡಿಗಳು ತಿರುಚಿ ವೈರಲ್ ಮಾಡಿದ ಸುದ್ದಿ
Leave A Reply