ಮತ್ತೆ ಗರಿಗೆದರಿದ ‘ ಮ್ಯಾಂಗಲೂರ್ ಮುಸ್ಲಿಂ ಪೇಜ್’ : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬಗ್ಗೆ ಅವಹೇಳನಕಾರಿ ಪೋಸ್ಟ್| ಸುಮೋಟೋ ಕೇಸ್ ದಾಖಲಿಸಿದ ಪೊಲೀಸರು
ಹಿಂದೂ ಯುವಕರ, ಹಿಂದೂ ದೇವರ ಬಗ್ಗೆ, ಕಟೀಲು ದೇವಿಯ ಬಗ್ಗೆ ಹೀಗೆ ಅನೇಕ ಹಿಂದೂ ಭಾವನೆಗಳ ಬಗ್ಗೆ ಪದೇ ಪದೇ ಅವಹೇಳನಕಾರಿಯಾಗಿ ಪೋಸ್ಟ್ ಹಾಕುತ್ತಿದ್ದ ಈ ಪೇಜ್ ತುಂಬಾ ಸಮಯ ಸ್ಥಗಿತವಾಗಿತ್ತು. ಇದೀಗ ಚುನಾವಣೆಗೆ ಕೆಲವೇ ಸಮಯ ಇರುವಾಗ ಈ ಪೇಜ್ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ.
2015 ರಲ್ಲಿ ಹರ್ಷ ಪ್ರವಾದಿಯನ್ನು ನಿಂದನೆ ಮಾಡಿರುವುದಾಗಿ ಆರೋಪಿಸಿ ಪ್ರವಾದಿ ನಿಂದನೆ ಮಾಡಿದವರನ್ನು ಎಂದಿಗೂ ಬಿಡಲ್ಲ ಎಂದು ಮ್ಯಾಂಗಲೂರ್ ಮುಸ್ಲಿಂ ಫೇಸ್ಬುಕ್ ಪೇಜ್ ನಲ್ಲಿ ಎಚ್ಚರಿಕೆ ಸಂದೇಶ ಹಾಕಲಾಗಿತ್ತು. ಅದೇ ಮೆಸೇಜನ್ನು ಈಗ ಪ್ರಕಟಿಸಿ ಸಾವಿನಲ್ಲೂ ಅವಹೇಳನ ಮಾಡಿ ವಿಕೃತ ಆನಂದ ಪಡೆದಿದ್ದಾರೆ.
ಇದೀಗ ಮಂಗಳೂರು ಮುಸ್ಲಿಂ ಫೇಸ್ಬುಕ್ ಪೇಜ್ ಕುರಿತು ಸ್ವಯಂ ಪ್ರೇರಿತರಾಗಿ ಈ ಪೇಜ್ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪೇಜ್ ಬಗ್ಗೆ ಸಾಕಷ್ಟು ಅನುಮಾನಗಳು ಈಗ ಮೂಡಿ ಬರುತ್ತಿದೆ. ಒಂದು ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ಹಿಂದೂಗಳ ಭಾವನೆ ಕೆಣಕಿದರೆ ಮತ್ತೊಂದು ಅದೇ ಹೆಸರಿನ ಪೇಜ್ ನಲ್ಲಿ ಮುಸ್ಲಿಂರ ಭಾವನೆಗೂ ಘಾಸಿಯಾಗುವಂತೆ ಪೋಸ್ಟ್ ಹಾಕಲಾಗುತ್ತಿದೆ. ಒಂದೇ ಡಿಪಿ ಹೊಂದಿರುವ ಈ ಪೇಜ್ ಕೋಮು ಗಲಭೆ ಸೃಷ್ಟಿಸುವಲ್ಲಿ ಮಹತ್ತರ ಪಾತ್ರ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಶಿವಮೊಗ್ಗ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಶಿವಮೊಗ್ಗ ಗಲಾಟೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷದ ಸಂದೇಶ ಹರಡುವ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ. ಮಂಗಳೂರಿನಲ್ಲಿ ಕೋಮುದ್ವೇಷ ಹರಡುವ ಪೋಸ್ಟ್ ಗಳು ಹಾಕಲಾಗುತ್ತಿದೆ. ನೂರಕ್ಕೂ ಹೆಚ್ಚು ಸಂಘಟನೆಗಳು, ವ್ಯಕ್ತಿಗಳು ಸೇರಿದಂತೆ 1064 ಪೇಜ್ ಗಳನ್ನು ಜನರನ್ನು ಕಳೆದ ಎರಡು ತಿಂಗಳಿಂದ ಗಮನಿಸುತ್ತಿದ್ದೇವೆ ಸೋಷಿಯಲ್ ಮೀಡಿಯಾ ಸೆಲ್ ಗಮನಿಸುತ್ತಿದೆ. ಯಾರೇ ವಿಷ ಬೀಜ ಬಿತ್ತಿದ್ರೂ ಅವರನ್ನು ವಶಕ್ಕೆ ಪಡೆಯುತ್ತೇವೆ ಎಂದು ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.