ಇಂಜಿನಿಯರ್ ಪದವೀಧರರಿಗೆ ಉದ್ಯೋಗವಕಾಶ|ರಾಷ್ಟ್ರೀಯ ಜಲ ವಿದ್ಯುತ್​ ಮಂಡಳಿಯಲ್ಲಿ ಒಟ್ಟು 133 ಹುದ್ದೆಗಳಿಗೆ ಅರ್ಜಿ ಆಹ್ವಾನ |1.20 ಲಕ್ಷ ರೂ.ವರೆಗೆ ವೇತನ

ಮಿನಿರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಎನ್​ಎಚ್​ಪಿಸಿ ಎಂದೇ ಖ್ಯಾತಗೊಂಡಿರುವ ನ್ಯಾಷನಲ್​ ಹೈಡ್ರೋ ಪವರ್​ ಕಾಪೋರ್ರೇಷನ್​ ಲಿಮಿಟೆಡ್​ನ (ರಾಷ್ಟ್ರೀಯ ಜಲ ವಿದ್ಯುತ್​ ಮಂಡಳಿ) ಹರಿಯಾಣ ಘಟಕದಿಂದ ವಿವಿಧ ಹುದ್ದೆಗಳಿಗೆ ಉತ್ತಮ ವೇತನದೊಂದಿಗೆ ಆನ್​ಲೈನ್​ ಅರ್ಜಿಆಹ್ವಾನಿಸಲಾಗಿದೆ.

ಆಯ್ಕೆಯಾದ ಅಭ್ಯಥಿರ್ಗಳನ್ನು ದೇಶ ಅಥವಾ ವಿದೇಶದಲ್ಲಿರುವ ಎನ್​ಎಚ್​ಪಿಸಿಯ ಜಂಟಿ ಉದ್ಯಮ/ ಯೋಜನೆ/ ವಿದ್ಯುತ್​ ಕೇಂದ್ರ/ ಶಾಖೆಗಳಿಗೆ ನೇಮಕ ಮಾಡಬಹುದಾಗಿದೆ.

ಒಟ್ಟು ಹುದ್ದೆಗಳು: 133

ಹುದ್ದೆ ವಿವರ

  • ಜೂನಿಯರ್​ ಇಂಜಿನಿಯರ್​- 133
  • ಸಿವಿಲ್​-68
  • ಎಲೆಕ್ಟ್ರಿಕಲ್​-34
  • ಮೆಕಾನಿಕಲ್​ -31

ವಿದ್ಯಾರ್ಹತೆ:
ಜೂ.ಇಂಜಿನಿಯರ್​ ಹುದ್ದೆಗೆ ಸಿವಿಲ್​, ಎಲೆಕ್ಟ್ರಿಕಲ್​, ಮೆಕಾನಿಕಲ್​ನಲ್ಲಿ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಪೂರ್ಣಾವಧಿಯಲ್ಲಿ ಡಿಪ್ಲೊಮಾ ಅಧ್ಯಯನ ಮಾಡದೇ ಬಿಇ, ಬಿ.ಟೆಕ್​ ಮಾಡಿರುವ ಅಭ್ಯಥಿರ್ಗಳಿಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.

ವಯೋಮಿತಿ:
ಗರಿಷ್ಠ 30 ವರ್ಷ ವಯೋಮಿತಿ ನಿಗದಿಯಾಗಿದ್ದು, ಮೀಸಲಾತಿ ಕೋರುವ ಅಭ್ಯಥಿರ್ಗಳಿಗೆ ವಯೋಸಡಿಲಿಕೆ ಇದೆ.

ವೇತನ:
ಮಾಸಿಕ 29,600- 1,19,500 ರೂ. ವೇತನ ಜತೆ ಸಂಸ್ಥೆಯ ನಿಯಮದನ್ವಯ ಡಿಎ, ಮನೆ ಬಾಡಿಗೆ ಭತ್ಯೆ, ವೈದ್ಯಕಿಯ ಸೌಲಭ್ಯ, ಪಿಎ​, ಪೆನ್ಶನ್​, ಗ್ರಾಚುಟಿ, ಕೆೆಟೇರಿಯನ್​ ಭತ್ಯೆ, ಕಾರ್ಯಕ್ಷಮತೆ ಸಂಬಂಧಿತ ವೇತನ ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗುವುದು.

ಅರ್ಜಿಶುಲ್ಕ:
ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ ಅಭ್ಯಥಿರ್ಗಳನ್ನು ಹೊರತುಪಡಿಸಿ ಉಳಿದ ಅಭ್ಯಥಿರ್ಗಳು 295 ರೂ. ಅರ್ಜಿಶುಲ್ಕವನ್ನು ಆನ್​ಲೈನ್​ ಮೂಲಕ ಪಾವತಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆ:
ಹಿಂದಿ ಹಾಗೂ ಇಂಗ್ಲಿಷ್​ನಲ್ಲಿ ಕಂಪ್ಯೂಟರ್​ ಆಧಾರಿತ ಆನ್​ಲೈನ್​ ಪರೀಕ್ಷೆ ನಡೆಸಿ ಅಭ್ಯಥಿರ್ಗಳ ಆಯ್ಕೆ ನಡೆಸಲಾಗುವುದು. ಬೆಂಗಳೂರು ಸೇರಿ 22 ನಗರಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದ್ದು, ಅಭ್ಯಥಿರ್ಗಳು ಅರ್ಜಿಸಲ್ಲಿಕೆ ಸಮಯದಲ್ಲಿ ತಮ್ಮ ಆಯ್ಕೆಯ 3 ಪರೀಕ್ಷಾ ಕೇಂದ್ರದ ಹೆಸರು ನಮೂದಿಸಲು ಸೂಚಿಸಲಾಗಿದೆ. ತಪ್ಪು ಉತ್ತರಗಳಿಗೆ 0.25 ಋಣಾತ್ಮಕ ಅಂಕ ಇರುತ್ತದೆ.


ಅಧಿಸೂಚನೆಗೆ: https://bit.ly/3s6Olm2
ಮಾಹಿತಿಗೆ: http://nhpcindia.com

Leave A Reply

Your email address will not be published.