Home Breaking Entertainment News Kannada ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ “ರಾಜಾಹುಲಿ” ಬಿ.ಎಸ್ ಯಡಿಯೂರಪ್ಪ !! | ಮಾಜಿ ಮುಖ್ಯಮಂತ್ರಿ ಬಣ್ಣ ಹಚ್ಚಿರುವ...

ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ “ರಾಜಾಹುಲಿ” ಬಿ.ಎಸ್ ಯಡಿಯೂರಪ್ಪ !! | ಮಾಜಿ ಮುಖ್ಯಮಂತ್ರಿ ಬಣ್ಣ ಹಚ್ಚಿರುವ ಸಿನಿಮಾ ಯಾವುದು ಗೊತ್ತಾ ??

Hindu neighbor gifts plot of land

Hindu neighbour gifts land to Muslim journalist

ಬಿಜೆಪಿ ಪಾಳಯದ “ರಾಜಹುಲಿ” ಬಿ. ಎಸ್ ಯಡಿಯೂರಪ್ಪ. ಕರ್ನಾಟಕ ಕಂಡ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಇವರು ಕೂಡ ಒಬ್ಬರು. ಇತ್ತೀಚಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ್ದಾರೆ. ಮೊಟ್ಟಮೊದಲ ಬಾರಿಗೆ ‘ತನುಜಾ’ ಎಂಬ ಹೊಸ ಚಿತ್ರದಲ್ಲಿ ಯಡಿಯೂರಪ್ಪ ಬಣ್ಣ ಹಚ್ಚಿದ್ದಾರೆ.

ಸಾಮಾಜಿಕ ಕಳಕಳಿಯುಳ್ಳ ಚಿತ್ರ ‘ತನುಜಾ’ ಕಥೆಗೆ ಮನಸೋತು ಕ್ಯಾಮೆರಾ ಮುಂದೆ ಯಡಿಯೂರಪ್ಪ ಬಂದಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಹರೀಶ್ ಹಳ್ಳಿ ನಿರ್ದೇಶನದ ‘ತನುಜಾ’ ಸಿನಿಮಾ ನೈಜ ಘಟನೆಗಳನ್ನು ಆಧರಿಸಿದೆ. ಕಷ್ಟಪಟ್ಟು ನೀಟ್ ಪರೀಕ್ಷೆಯನ್ನು ಬರೆಯುವ ಹುಡುಗಿಯೊಬ್ಬಳ ಕಥೆಯನ್ನಾಧಿಸಿದೆ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

‘ತನುಜಾ’ ಸಿನಿಮಾದ ಕಥೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ತುಂಬಾ ಇಷ್ಟವಾಗಿದ್ದು, ಹೀಗಾಗಿಯೇ ಅವರು ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದರು. ಯಡಿಯೂರಪ್ಪ ನಟಿಸಿರುವ ದೃಶ್ಯವನ್ನು ಚಿತ್ರತಂಡವು ಸೆರೆಹಿಡಿದಿದೆ.

ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ನಡುವೆ ಬಹಳ ಹಿಂದಿನಿಂದಲೂ ವಿಶೇಷ ನಂಟಿದೆ. ಚಿತ್ರರಂಗದಲ್ಲಿ ಮಿಂಚಿದ ಅನೇಕರು ರಾಜಕೀಯಕ್ಕೂ ಕಾಲಿಟ್ಟು ಸಾಧನೆ ಮಾಡಿದ್ದಾರೆ. ಅದೇ ರೀತಿ ರಾಜಕೀಯದಲ್ಲಿ ಸಾಧನೆ ಮಾಡಿದ ಅನೇಕರು ನಂತರ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿ ಮಿಂಚಿದ್ದಾರೆ. ಈಗ ಬಿಎಸ್​ವೈ ಕೂಡ ಬಣ್ಣ ಹಚ್ಚಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಈಗಾಗಲೇ ‘ತನುಜಾ’ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಶೂಟಿಂಗ್​ನಲ್ಲಿ ಬಿಎಸ್​ವೈ ಭಾಗಿಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೊರೋನಾ ಸಾಂಕ್ರಾಮಿಕದ ಸಂಕಷ್ಟದ ಮಧ್ಯೆಯೂ ​ನೀಟ್​ ಪರೀಕ್ಷೆ ಬರೆಯಲು 350 ಕಿ.ಮೀ ಪ್ರಯಾಣ ಮಾಡಿ ಸುದ್ದಿಯಾಗಿದ್ದ ಯುವತಿಯೊಬ್ಬಳ ರಿಯಲ್ ಲೈಫ್ ಕಥೆಯನ್ನಾಧರಿಸಿ ಸಿನಿಮಾ ನಿರ್ಮಿಸಲಾಗುತ್ತಿದೆ ಎಂದು ತಿಳಿದುಬಂದಿದೆ.