Home latest ಆಮ್ಲೆಟ್ ಗಾಗಿ ಹೆಂಡತಿಯ ಹತ್ಯೆ! ನಿವೃತ್ತ ಸಬ್ ಇನ್ಸ್ ಪೆಕ್ಟರ್ ಮಗನ ಕೃತ್ಯ!!!

ಆಮ್ಲೆಟ್ ಗಾಗಿ ಹೆಂಡತಿಯ ಹತ್ಯೆ! ನಿವೃತ್ತ ಸಬ್ ಇನ್ಸ್ ಪೆಕ್ಟರ್ ಮಗನ ಕೃತ್ಯ!!!

Hindu neighbor gifts plot of land

Hindu neighbour gifts land to Muslim journalist

ಆಮ್ಲೆಟ್ ಮಾಡಿಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ. ನಂತರ ಆಕೆಯ ಮೃತದೇಹವನ್ನು ಸೀಲಿಂಗ್ ಫ್ಯಾನ್ ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ ಪತಿರಾಯ.

ಆರೋಪಿ ಅಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ನಿವೃತ್ತ ಸಬ್ ಇನ್ಸ್ ಪೆಕ್ಟರ್ ರಾಮ್ ವಿನಯ್ ಸಿಂಗ್‌ ಪುತ್ರ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಮದ್ಯವ್ಯಸನಿಯಾಗಿದ್ದು, ಗುರುವಾರ ಸಂಜೆ ಪಾನಮತ್ತನಾಗಿ ಮನೆಗೆ ಬಂದಿದ್ದ. ಬರುವಾಗ ಮೊಟ್ಟೆಗಳನ್ನು ತಂದಿದ್ದ. ನಂತರ ಆಮ್ಲೆಟ್ ಮಾಡಿಕೊಡುವಂತೆ ಪತ್ನಿ ನೀತು ಸಿಂಗ್ (30) ಹೇಳಿದ. ಆದರೆ ಆಕೆ ಮಾಡಲು ಒಪ್ಪಲಿಲ್ಲ. ಗುರುವಾರ ಮೊಟ್ಟೆ ಮಾಡುವಂತಿಲ್ಲ ಮನೆಯಲ್ಲಿ ಎಂದು ಹೇಳಿದ್ದಾಳೆ. ನಂತರ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಗಂಡನ ಮದ್ಯದ ಚಟದಿಂದ ಹೆಂಡತಿ ಮೊದಲೇ ರೋಸಿಹೋಗಿದ್ದಳು. ಅಂದು ಕೂಡಾ ಜಗಳ ತಾರಕಕ್ಕೇರಿದೆ. ಇದರಿಂದ ಕೋಪಗೊಂಡ ಅಜಿತ್ ಮೊದಲು ಆಕೆಯನ್ನು ಬೆಡ್ ರೂಂನಲ್ಲಿ ಮೃಗೀಯವಾಗಿ ಹಲ್ಲೆ ಮಾಡಿ, ನಂತರ ಉಸಿರುಗಟ್ಟಿಸಿ ಸಾಯಿಸಿ, ಸೀಲಿಂಗ್ ಫ್ಯಾನ್ ಗೆ ನೇತು ಹಾಕಿದ್ದಾನೆ. ನಂತರ ಕೂಡಲೇ ಮನೆಯಿಂದ ಹೊರಗೆ ಹೋಗಿದ್ದಾನೆ.

ಸ್ವಲ್ಪ ಹೊತ್ತಿನ ನಂತರ ಏನೂ ಶಬ್ದ ಬರದೇ ಇದ್ದುದ್ದನ್ನು ನೋಡಿ ಕೋಣೆಗೆ ಹೋಗಿ ನೋಡಿದಾಗ ಮೃತದೇಹ ಫ್ಯಾನ್ ನಲ್ಲಿ ನೇತಾಡುತ್ತಿತ್ತು ಎಂದು ಆರೋಪಿ ತಂದೆ ಪೊಲೀಸರಲ್ಲಿ ಹೇಳಿದ್ದಾರೆ.

ಎಫ್ ಐ ಆರ್ ನಲ್ಲಿ ಈ ಮೇಲೆ ನೀಡಿದ ಹೇಳಿಕೆ ಆರೋಪಿಯ ತಂದೆ ನೀಡಿದ್ದಾಗಿದ್ದು, ಎಲ್ಲಾ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.