ಕುಂಕುಮ, ಬಳೆ, ವಿಭೂತಿ ಶೋಕಿಗಾಗಿಯಲ್ಲ,ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಇದೆ|ಇದರ ಕುರಿತು ಮಾತಾಡಿದರೆ ಸಿಡಿದೇಳಬೇಕಾಗುತ್ತದೆ ಎಚ್ಚರ-ಪ್ರಮೋದ್ ಮುತಾಲಿಕ್
ಬಾಗಲಕೋಟೆ:ಕುಂಕುಮ ಹಾಕಬಾರದು ಎಂಬ ವಾದದ ಕುರಿತು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸಿಡಿದೆದ್ದಿದ್ದು,ಕುಂಕುಮ, ಬಳೆ, ವಿಭೂತಿ ವೈಜ್ಞಾನಿಕವಾಗಿದ್ದು,ಇದು ಶೋಕಿಗಾಗಿ ಅಥವಾ ಫ್ಯಾಶನ್‌ಗಾಗಿ ಅಲ್ಲ. ಅಹಂಕಾರವೂ ಅಲ್ಲ. ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಇದ್ದು ಈ ಬಗ್ಗೆ ಮಾತಾಡಬೇಡಿಯೆಂದು ಎಚ್ಚರಿಕೆ ನೀಡಿದ್ದಾರೆ.
ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಹಿಂದಿರುವ ಇಸ್ಲಾಮಿಕ್ ಶಕ್ತಿಗೆ ಬೆಲೆ ಕೊಡದೆ ಶಿಕ್ಷಣಕ್ಕೆ ಮಹತ್ವ ಕೊಡಬೇಕು. ನಿಮಗೆ ಜಾಬ್ ಬೇಕಾದರೆ ಹಿಜಾಬ್ ಕೇಳಬೇಡಿ.ಕೆಲಸಕ್ಕೆ ವಿದ್ಯೆ ಬೇಕಿದೆಯೇ ಹೊರತು ಹಿಜಾಬ್ ಅಲ್ಲ ಎಂದರು.
ಸುದ್ದಿಗಾರರ ಜತೆ ಮಾತನಾಡಿದ ಅವರು,’ಸಮವಸ್ತ್ರ ಅಂದರೆ ಬರೀ ಬಟ್ಟೆ. ಅದರ ಬಗ್ಗೆ ಮಾತ್ರ ಮಾತಾಡಿ. ಗಣಪತಿ ಪೂಜೆ, ಸರಸ್ವತಿ ಪೂಜೆ, ಕುಂಕುಮ ಬಳೆ ಬಗ್ಗೆ ಮಾತಾಡಿದರೆ ಸಹಿಸುವುದಿಲ್ಲ. ಹಿಜಾಬ್ ಹಿಂದೆ ಇಸ್ಲಾಮೀಕರಣ ಇದೆ. ಬರಿ ಹಿಜಾಬ್ ಅಷ್ಟೇ ಅಲ್ಲ. ಈಗ ಬುರ್ಖಾ ಹಾಕಿಕೊಂಡು ಬರುತ್ತಾರೆ. ಮುಂದೆ ನಮಾಜಿಗೆ ಅವಕಾಶ ಕೇಳುತ್ತಾರೆ. ಒಂದೊಂದಾಗಿ ಮುನ್ನುಗ್ಗುವ ಪ್ರವೃತ್ತಿ ಇಸ್ಲಾಂ ಇತಿಹಾಸದಲ್ಲೇ ಇದೆ’ಎಂದರು.