Home Interesting ನಾಲ್ಕು ಲಕ್ಷ ಸಾಲವನ್ನು ಕೇವಲ ಎರಡೇ ವರ್ಷದಲ್ಲಿ ತೀರಿಸಿದ ಮಹಿಳೆ| ತಾನು ಅನುಸರಿಸಿದ ಮಾರ್ಗವನ್ನು ಡೀಟೇಲ್...

ನಾಲ್ಕು ಲಕ್ಷ ಸಾಲವನ್ನು ಕೇವಲ ಎರಡೇ ವರ್ಷದಲ್ಲಿ ತೀರಿಸಿದ ಮಹಿಳೆ| ತಾನು ಅನುಸರಿಸಿದ ಮಾರ್ಗವನ್ನು ಡೀಟೇಲ್ ಆಗಿ ತಿಳಿಸಿದ್ದಾಳೆ ನೋಡಿ ಈಕೆ

Hindu neighbor gifts plot of land

Hindu neighbour gifts land to Muslim journalist

ಜೀವನ ನಡೆಸಬೇಕಂದ್ರೆ ಸಾಲ ಅಗತ್ಯ ಎಂಬಂತಾಗಿದೆ ಈ ಕಾಲದಲ್ಲಿ.ಲೋನ್ ಪಡೆಯುವಾಗ ಪ್ರತಿಯೊಬ್ಬರೂ ಖುಷಿಯಿಂದ ಸ್ವೀಕರಿಸುತ್ತಾರೆ.ಆದ್ರೆ ಅದರ ನೋವು ತಿಳಿಯೋದು ಮರುಪಾವತಿ ಮಾಡುವಾಗ. ಸ್ವಲ್ಪ ಸಾಲವಾದರೂ ಅದನ್ನು ತೀರಿಸುವಷ್ಟೊತ್ತಿಗೆ ಸಮಯವೇ ಕಳೆದು ಹೋಗಿರುತ್ತೆ. ಹೀಗೆ ಸಾಲದ ಭಾದೆಯಿಂದ ಹೊರಬರಲು ಅನೇಕ ಉಪಾಯವನ್ನು ಹೂಡುತ್ತಾರೆ. ಅದೇ ರೀತಿ ಇಲ್ಲೊಬ್ಬಳು ತನ್ನ ನಾಲ್ಕು ಲಕ್ಷದ ಸಾಲವನ್ನು ಎರಡೇ ವರ್ಷದಲ್ಲಿ ಉಪಾಯದಿಂದ ತೀರಿಸಿದ್ದಾಳೆ. ಅದೇಗೆ ಗೊತ್ತೇ!?

ಮಹಿಳೆಯೊಬ್ಬಳು ಕೇವಲ ಎರಡು ವರ್ಷಗಳಲ್ಲಿ ತನ್ನ £ 4,000 (ರೂ.4 ಲಕ್ಷ) ಸಾಲವನ್ನು ತೆರವುಗೊಳಿಸಿದ ಬಗೆ ಹೇಗೆ ಎಂಬುದಾಗಿ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ.ದೇವಾಂಶಾ ಅವರು ತಮ್ಮ ಸಂಬಳವನ್ನು ಐದು ಭಾಗಗಳಾಗಿ ಹೇಗೆ ವಿಭಜಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಆಕೆ ತನ್ನ ಗಳಿಕೆಯ ಶೇ.60 ರಷ್ಟನ್ನು ಅಗತ್ಯ ಜೀವನ ವೆಚ್ಚಗಳಿಗೆ, ಶೇ.10ರಷ್ಟು ತನ್ನ ಸಾಲಗಳನ್ನು ಪಾವತಿಸಲು, ಶೇ.10 ಹೂಡಿಕೆ ಮತ್ತು ಆಸ್ತಿ ನಿರ್ಮಾಣಕ್ಕಾಗಿ, 10 ಪ್ರತಿಶತ ಮೋಜಿಗಾಗಿ ಮತ್ತು ಉಳಿದ ಶೇ.10ರಷ್ಟು ಹಣವನ್ನು ತುರ್ತು ನಿಧಿಗಾಗಿ ಇರಿಸುತ್ತಾಳೆ.

ನಿಮ್ಮ ಅಗತ್ಯ ವೆಚ್ಚಗಳು ನಿಮ್ಮ ಸಂಬಳದ ಶೇಕಡಾ 60ಕ್ಕಿಂತ ಹೆಚ್ಚು ಅಥವಾ ಕಡಿಮೆಯಿದ್ದರೆ ಏನು ಮಾಡಬೇಕೆಂದು ಬಳಕೆದಾರರು ಕೇಳಿದಾಗ, ನೀವು ರೂಮ್‌ಮೇಟ್ ಅನ್ನು ಪಡೆಯುವುದು ಅಥವಾ ನಿಮ್ಮ ಅಗತ್ಯ ವೆಚ್ಚಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು ಎಂದು ದೇವಾಂಶ ವಿವರಿಸಿದ್ದಾರೆ. ಖರ್ಚು ಅಗತ್ಯವಿದ್ದರೆ, ಶೇಕಡಾವಾರುಗಳನ್ನು ಬದಲಾಯಿಸಬಹುದು ಅಥವಾ ಹೂಡಿಕೆ ಮಾಡಬಹುದು ಮತ್ತು ಮೋಜಿನ ಹಣವನ್ನು ಸಂಪೂರ್ಣವಾಗಿ ಕಡಿತಗೊಳಿಸಬಹುದು ಎಂದು ಹೇಳಿದ್ದಾರೆ.ಹೀಗೆ ನೋಡಿ ಅತಿಯಾದ ಬುದ್ದಿವಂತಿಕೆಯಿಂದ ಏನನ್ನೂ ಗಳಿಸಬಹುದು ಎಂಬುದಕ್ಕೆ ಈಕೆಯೇ ಸ್ಫೂರ್ತಿ ಅಲ್ವಾ?