Home latest ವೈದ್ಯರ ಎಡವಟ್ಟಿನಿಂದ ಪ್ರಾಣವನ್ನೇ ಕಳೆದುಕೊಂಡ ಎರಡು ವರ್ಷದ ಪುಟ್ಟ ಕಂದಮ್ಮ!

ವೈದ್ಯರ ಎಡವಟ್ಟಿನಿಂದ ಪ್ರಾಣವನ್ನೇ ಕಳೆದುಕೊಂಡ ಎರಡು ವರ್ಷದ ಪುಟ್ಟ ಕಂದಮ್ಮ!

Hindu neighbor gifts plot of land

Hindu neighbour gifts land to Muslim journalist

ವೈದ್ಯರನ್ನು ದೇವರು ಎಂದು ಹೇಳುತ್ತಾರೆ. ಯಾಕಂದ್ರೆ ಜೀವ ಉಳಿಸುವವರು ಎಂಬ ನಂಬಿಕೆಯಿಂದ. ಆದ್ರೆ ಇಂತಹ ವೈದ್ಯರಿಂದಲೇ ಒಂದು ಮುದ್ದು ಕಂದನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.ಹೌದು. ಹುಬ್ಬಳ್ಳಿಯ ಕಿಮ್ಸ್ ವೈದ್ಯರಿಂದ ಮತ್ತೊಂದು ಮಹಾ ಎಡವಟ್ಟು ನಡೆದಿದ್ದು,ವೈದ್ಯರ ನಿರ್ಲಕ್ಷ್ಯಕ್ಕೆ ಎರಡು ವರ್ಷದ ಮಗು ಬಲಿಯಾಗಿದೆ.

ಸಂಜಯ್ ಹಾಗೂ ಕೀರ್ತಿ ದಂಪತಿಯ ಮುದ್ದಾದ ಮಗು ರಕ್ಷಾ ಚೌಧರಿಗೆ ಬಾಯಿಯೊಳಗೆ ಗಡ್ಡೆಯಾಗಿದ್ದ ಕಾರಣ ಕಂದಮ್ಮನನ್ನು ಪೋಷಕರು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದರು. ಆದ್ರೆ ಪೋಷಕರ ಅನುಮತಿ ಪಡೆಯದೇ ವೈದ್ಯರು ಮಗುವಿಗೆ ಆಪರೇಷನ್ ಮಾಡಿದ್ದಾರೆ. ಅಪರೇಷನ್ ಬಳಿಕ ತೀವ್ರ ರಕ್ತಸ್ರಾವ ಆಗಿ ಮಗು ಪ್ರಾಣ ಬಿಟ್ಟಿದೆ. ಅಡ್ಮಿಟ್ ಆಗುವ ವೇಳೆ ಚೆನ್ನಾಗಿಯೇ ಇದ್ದ ಕಂದಮ್ಮ ಸರ್ಜರಿ ಬಳಿಕ ರಕ್ತಸ್ರಾವದಿಂದ ಮೃತಪಟ್ಟಿದೆ. ನಗು ನಗುತ್ತಲೇ ಮಗು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು, ಈಗ ಈ ರೀತಿ ಕಣ್ಣು ಮುಚ್ಚಿಕೊಂಡಿದೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಇನ್ನು ವೈದ್ಯರು ಆಪರೇಷನ್ ಮಾಡಿದ ಬಳಿಕ ತೀವ್ರ ರಕ್ತಸ್ರಾವ ಆದ ಕಾರಣ ಖಾಸಗಿ ಆಸ್ಪತ್ರೆಗೆ ಮಗುವನ್ನು ಕಳುಹಿಸಲಾಗಿತ್ತು. ಅಲ್ಲಿಯೂ ರಕ್ತಸ್ರಾವ ನಿಲ್ಲದ ಹಿನ್ನಲೆ‌ ವಾಪಸ್ ಕಿಮ್ಸ್ಗೆ ಕಳಿಸಿದ್ದಾರೆ. ಕಿಮ್ಸ್ಗೆ ವಾಪಸ್ ಬಂದ ಮೇಲೆ ಮಗು ಉಸಿರು ನಿಲ್ಲಿಸಿದೆ. ಕಿಮ್ಸ್ ಬಳಿ ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುದ್ದಾದ ಮಗು ಕಳೆದುಕೊಂಡ ತಾಯಿಯ ಕಣ್ಣೀರು ನಿಲ್ಲುತಿಲ್ಲ.

ನಮ್ಮ ತಪ್ಪೇನು ಇಲ್ಲ ಅಂತ ವೈದ್ಯರು ಹೇಳುತ್ತಿದ್ದಾರೆ. ಮಗು ಸಾವನ್ನಪ್ಪಿದ್ದಾರು ಹೇಗೆ? ಎಂದು ಮಗುವಿನ ತಾಯಿ ಕೀರ್ತಿ ಚೌಧರಿ ಕಣ್ಣೀರು ಹಾಕುತ್ತ ಪ್ರಶ್ನೆ ಮಾಡಿದ್ದಾರೆ.ಆಸ್ಪತ್ರೆಗೆ ಬಂದ ಮೇಲೆ ಮಗು ಚೆನ್ನಾಗಿದೆ ಅಂತ ವೈದ್ಯರು ತಿಳಿಸಿದ್ದರು. ನಮ್ಮ ಅನುಮತಿ ಪಡೆಯದೆ ಮಗುವಿಗೆ ಸರ್ಜರಿ ಮಾಡಿದ್ದಾರೆ. ಬಳಿಕ ತೀವ್ರರಕ್ತಸ್ರಾವವಾಗಿದೆ. ಅದಕ್ಕೆ ಹೊಣೆ ಯಾರು? ಮೊದಲೆ ಹೀಗೆ ಆಗುತ್ತೆ ಎನ್ನೋದು ವೈದ್ಯರಿಗೆ ಗೊತ್ತಿರಲಿಲ್ಲವೇ. ಇವಾಗ ಕೇಳಿದ್ರೆ ಹ್ಯಾಮೆನ್ ಜಿಯೊಮ್ ಕಾಯಿಲೆ ಇತ್ತು‌ ಎನ್ನುತ್ತಿದ್ದಾರೆ ಎಂದು ಮಗು ತಂದೆ ಸಂಜಯ್ ಚೌಧರಿ ಆಕ್ರೋಶ ಹೊರ ಹಾಕಿದ್ದಾರೆ.