ಪ್ರತಿಭಟನೆಗೋಸ್ಕರ ಕತ್ತೆಯನ್ನು ಕದ್ದ ಕಾಂಗ್ರೆಸ್ ಮುಖಂಡ! ಕತ್ತೆ ಮಾಲೀಕನಿಂದ ದೂರು

Share the Article

ಯುವಕಾಂಗ್ರೆಸ್ ಮುಖಂಡನೊಬ್ಬ ಕತ್ತೆಯನ್ನು ಕದ್ದು ಆ ಕತ್ತೆಯನ್ನು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ವಿರುದ್ಧದ ಪ್ರತಿಭಟನೆಯಲ್ಲಿ ಬಳಸಿದ್ದಕ್ಕಾಗಿ ಈಗ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ನಡೆದಿರುವುದು ಕರೀಂನಗರ, ತೆಲಂಗಾಣದಲ್ಲಿ.

ಬಂಧಿತ ಆರೋಪಿಯನ್ನು ವೆಂಕಟ್ ಬಲ್ಮೂರ್ ಎಂದು ಗುರುತಿಸಲಾಗಿದೆ. ಈ ಯುವಕಾಂಗ್ರೆಸ್ ಮುಖಂಡ ರಾಜ್ ಕುಮಾರ್ ಎಂಬ ವ್ಯಕ್ತಿಗೆ ಸೇರಿದ ಕತ್ತೆಯನ್ನು ಕದ್ದು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ವಿರುದ್ಧ ಪ್ರತಿಭಟನೆಯಲ್ಲಿ ಬಳಸಿಕೊಂಡಿದ್ದಾನೆ‌.

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹುಟ್ಟುಹಬ್ಬದಂದು ಕತ್ತೆಯೊಂದಿಗೆ ಪ್ರತಿಭಟನೆ ನಡೆಸಿದ ತೆಲಂಗಾಣ ಎನ್ ಎಸ್ ಯುಐ ಅಧ್ಯಕ್ಷ ವೆಂಕಟ್ ಬಲ್ಮೂರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರೀಂನಗರದ ಶಾತವಾಹನ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಯ ನಂತರ ವೆಂಕಟ್ ಬಲ್ಮೂರ್ ನನ್ನು ಬಂಧಿಸಲಾಯಿತು.

ಈ ಸಂಬಂಧ ತೆಲಂಗಾಣದ ಜಮ್ಮುಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್ ನಾಯಕನ ಜೊತೆಗೆ ಇತರೆ 6 ಮಂದಿಯ ವಿರುದ್ಧವೂ ಕೇಸ್ ದಾಖಲಾಗಿದೆ. ಆದರೆ ಉಳಿದ 6 ಮಂದಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

Leave A Reply