Home Karnataka State Politics Updates ಸಿಂಧೂರ, ಕುಂಕುಮ ಧರಿಸಿ ಬಂದವರನ್ನು ತಡೆಯಬಾರದು – ಬಿ ಸಿ ನಾಗೇಶ್| ಹಿಜಾಬ್ ಧಾರ್ಮಿಕ ಸಂಕೇತ-...

ಸಿಂಧೂರ, ಕುಂಕುಮ ಧರಿಸಿ ಬಂದವರನ್ನು ತಡೆಯಬಾರದು – ಬಿ ಸಿ ನಾಗೇಶ್| ಹಿಜಾಬ್ ಧಾರ್ಮಿಕ ಸಂಕೇತ- ಬಿಂದಿ, ಸಿಂಧೂರ ಅಲಂಕಾರಿಕ ವಸ್ತು: ಹೋಲಿಕೆ ಸರಿಯಲ್ಲ

Hindu neighbor gifts plot of land

Hindu neighbour gifts land to Muslim journalist

ಹಿಜಾಬ್ ಪ್ರಕರಣ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಇದೀಗ ಹಿಜಾಬ್ ಜೊತೆ ಜೊತೆಗೆ ಸಿಂಧೂರ ಕುಂಕುಮ ಹಾಕುವುದಕ್ಕೆ ಕೂಡಾ ಈ ಸಂಘರ್ಷ ಬಂದಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ , ” ಸಿಂಧೂರ, ಕುಂಕುಮ, ಬಳೆ ಪ್ರಶ್ನೆ ಬೇಡ. ಅದು ನಮ್ಮ ಸಂಸ್ಕೃತಿಯ ಪ್ರತೀಕ. ಅಲಂಕಾರಿಕ ವಸ್ತು. ಅದಕ್ಕೂ ಹಿಜಾಬ್ ಗೂ ಸಂಬಂಧವಿಲ್ಲ. ಅದನ್ನು ಧರಿಸಿ ಬಂದವರನ್ನು ಶಾಲೆ- ಕಾಲೇಜುಗಳಲ್ಲಿ ತಡೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಜಾಬ್ ಧಾರ್ಮಿಕ ಗುರುತನ್ನು ಸಂಕೇತಿಸುವ ಬಟ್ಟೆ. ಹಾಗೆಂದು ಬಿಂದಿ, ಸಿಂಧೂರ, ಕುಂಕುಮಗಳು ಅಲಂಕಾರಿಕ ವಸ್ತುಗಳನ್ನು ಧರಿಸಿ ಬಂದ ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳಲು ಆದೇಶ ನೀಡಿದ್ದೇವೆ” ಎಂದು ಹೇಳಿದ್ದಾರೆ.

ನಿನ್ನೆ ವಿಜಯಪುರದ ಇಂಡಿ ಪಟ್ಟಣದ ಸರಕಾರಿ ಪಿಯು ಕಾಲೇಜಿನಲ್ಲಿ ಈ ಕುಂಕುಮ ಹಾಕಿಕೊಂಡು ಬಂದ ವಿದ್ಯಾರ್ಥಿಯನ್ನು ಶಿಕ್ಷಕರು ತಡೆದಿದ್ದು ಭಾರೀ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಈ ಮಾತನ್ನು ಹೇಳಿದ್ದಾರೆ.