Home latest 9 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ | ಐ ಹೇಟ್ ಯು ಪ್ರಿನ್ಸಿಪಾಲ್ ಎಂದು ಡೆತ್...

9 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ | ಐ ಹೇಟ್ ಯು ಪ್ರಿನ್ಸಿಪಾಲ್ ಎಂದು ಡೆತ್ ನೋಟಲ್ಲಿ ಬರೆದಿದ್ದಾರೂ ಯಾಕೆ ?

Hindu neighbor gifts plot of land

Hindu neighbour gifts land to Muslim journalist

ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಶೆಟ್ಟಿಹಳ್ಳಿ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿ‌ ಕೆ ಎಸ್ ರಮ್ಯಾ ಮೂರ್ತಿ. ಟಿ ದಾಸರಹಳ್ಳಿಯ ಸೌಂದರ್ಯ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದು ಡೆತ್ ನೋಟ್ ನಲ್ಲಿ ಐ ಹೇಟ್ ಯು ಪ್ರಿನ್ಸಿಪಾಲ್ ಎಂದು ಬರೆದಿದ್ದಾಳೆ.

ರಮ್ಯಾ ಡೆತ್ ನೋಟಲ್ಲಿ ” ಡಿಯರ್ ಸ್ಕೂಲ್ ಮಾರ್ಕ್ಸ್ ಇಸ್ ನಾಟ್ ಎವರಿತಿಂಗ್. ಐ ಹೇಟ್ ಯು ಪ್ರಿನ್ಸಿಪಾಲ್” ಎಂದು ಇಂಗ್ಲೀಷ್ ನಲ್ಲಿ ಬರೆದಿದ್ದಾಳೆ.

ಅಷ್ಟು ಮಾತ್ರವಲ್ಲದೇ ಕೆಲ ವಿದ್ಯಾರ್ಥಿಗಳ‌ ಹೆಸರನ್ನು ಕೂಡಾ ಬರೆದಿದ್ದಾಳೆ.

ಈ ಹಿಂದೆ ರಮ್ಯಾಳ ತಾಯಿ ಶಾಲಾ ಆಡಳಿತ ಮಂಡಳಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ನೀಡಿದ್ದರು. ಈ ಕಾರಣದಿಂದಾಗಿ ವಿದ್ಯಾರ್ಥಿನಿ ರಮ್ಯಾಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

ಯಶವಂತಪುರ ರೈಲ್ವೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.