ಬುಟ್ಟಿ ತುಂಬಾ ಚಿಲ್ಲರೆ ಹಣವನ್ನು ಶೋರೂಮ್ ಗೆ ನೀಡಿ ತನ್ನ ಕನಸಿನ ಸ್ಕೂಟರನ್ನು ಖರೀದಿಸಿದ ಪುಟ್ಟ ಅಂಗಡಿಯ ಮಾಲೀಕ!

Share the Article

ಪುಟ್ಟ ಅಂಗಡಿಯ ಮಾಲೀಕನೊಬ್ಬ ತನ್ನ ದುಡಿಮೆಯ ಹಣದಲ್ಲಿ ಉಳಿತಾಯ ಮಾಡಿ ಕಾಸು ಕೂಡಿಟ್ಟು ಬ್ರಾಂಡ್ ಮೊಬಿಲಿಟಿ ಸ್ಕೂಟರನ್ನು ಖರೀದಿಸಿದ್ದಾರೆ. ಅದು ಕೂಡಾ ಹೇಗೆ ಅಂತೀರಾ ? ಎಲ್ಲವೂ ನಾಣ್ಯಗಳ ಮೂಲಕ.

ಮೂರು ನಾಲ್ಕು ಬುಟ್ಟಿಯಲ್ಲಿ ಚಿಲ್ಲರೆ ಕಾಸನ್ನು ಶೋರೂಮ್ ಗೆ ನೀಡಿ, ಗಾಡಿಯೊಂದನ್ನು ಖರೀದಿಸಿದ್ದಾನೆ. ಈತನ ಬಹುದಿನಗಳ ಆಸೆ ದ್ವಿಚಕ್ರವಾಹನ ಖರೀದಿಸುವುದು. ಈಗ ಅದು ಸಾಕಾರಗೊಂಡಿದೆ. ಅದಕ್ಕೆ ಆತ ಕೊಟ್ಟಿರುವುದು ಬುಟ್ಟಿ ತುಂಬಾ ದುಡ್ಡು!

ಯೂಟ್ಯೂಬರ್ ಹಿರಾಕ್ ಜೆ ದಾಸ್ ಫೇಸ್ ಬುಕ್ ನಲ್ಲಿ ವ್ಯಕ್ತಿಯೊಬ್ಬನ ಖರೀದಿ ಮಾಡಿದ ಗಾಡಿ ಹಾಗೂ ಬುಟ್ಟಿ ತುಂಬಾ ದುಡ್ಡಿನ ಫೋಟೋ ಹಾಕಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ವ್ಯಕ್ತಿ ತನ್ನ ದ್ವಿಚಕ್ರ ಗಾಡಿ ಕೊಂಡುಕೊಳ್ಳಲು ಸುಮಾರು ಏಳರಿಂದ ಎಂಟು ತಿಂಗಳುಗಳವರೆಗೆ ಹಣವನ್ನು ಕೂಡಿಟ್ಟು ತೆಗೆದುಕೊಂಡಿದ್ದಾನೆ.

ಈ ಘಟನೆ ನಡೆದಿರುವುದು ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಹೌಲಿಯಲ್ಲಿರುವ ಸ್ಕೂಟರ್ ಶೋರೂಂನಲ್ಲಿ‌. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಎಲ್ಲರೂ ಈತನನ್ನು ಶ್ಲಾಘಿಸುತ್ತಿದ್ದಾರೆ. ಕನಸು ಎಲ್ಲರೂ ಕಾಣುತ್ತಾರೆ ಆದರೆ ಈಡೇರಿಸುವ ಛಲ ಇರಬೇಕು ಎಂದು ಪ್ರಶಂಸೆಯ ಕಮೆಂಟ್ ಬರುತ್ತಿದೆ ಈ ವ್ಯಕ್ತಿಗೆ‌.

Leave A Reply