Home latest ಹೆತ್ತ ತಾಯಿಯ ಮೇಲೆ ಹಿಂದಿನಿಂದ ಬಂದು ಜೀಪ್ ಹತ್ತಿಸಿ ಕೊಂದ ಪುತ್ರ| ತಾಯಿ ಬೀದಿ ಹೆಣವಾಗಿದ್ದನ್ನು...

ಹೆತ್ತ ತಾಯಿಯ ಮೇಲೆ ಹಿಂದಿನಿಂದ ಬಂದು ಜೀಪ್ ಹತ್ತಿಸಿ ಕೊಂದ ಪುತ್ರ| ತಾಯಿ ಬೀದಿ ಹೆಣವಾಗಿದ್ದನ್ನು ನೋಡಿ ಮಮ್ಮಲ ಮರುಗಿದ ಸ್ಥಳೀಯರು

Hindu neighbor gifts plot of land

Hindu neighbour gifts land to Muslim journalist

ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೇ ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು ತಾಯಿ ಇಲ್ಲಿ ಒಬ್ಬಳೇ! ಇಂತಹ ತಾಯಿಯನ್ನು ನಿಂದಿಸಿದರೆ, ಹಿಂಸಿಸಿದರೆ ಅದಕ್ಕೆ ಪರಿಹಾರ ಇಲ್ಲ ಎಂದು ಪುರಾಣಗಳು ಹೇಳುತ್ತವೆ. ಆದರೆ ಇಲ್ಲಿ ಆಕೆಯನ್ನು ನಿಂದಿಸಿ, ಹಿಂಸಿಸಿದ್ದು ಮಾತ್ರ ಅಲ್ಲ, ಆಕೆಯನ್ನು ಕೊಂದೇ ಬಿಟ್ಟಿದ್ದಾನೆ. ಈ ನರಹಂತಕ ಪಾಪಿ ಬೇರೆ ಯಾರೂ ಅಲ್ಲ! ಸ್ವತಃ ಆಕೆಯ ಹೊಟ್ಟೆಯಿಂದ ಹುಟ್ಟಿದ ಮಗ!!!

ಈ ಘಟನೆ ನಡೆದಿರುವುದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹನುಮಂತಪುರದಲ್ಲಿ. 65 ವರ್ಷದ ನಾಗಮ್ಮ ಎಂಬಾಕೆಯೇ ಹತ್ಯೆಯಾಗಿರುವುದು. ಇವರ ಮಗ 45 ವರ್ಷದ ಹೇಮರಾಜ್ ಎಂಬಾತನೇ ಕೊಲೆ ಮಾಡಿದ ವ್ಯಕ್ತಿ.

ಹಣಕಾಸಿನ ವಿಚಾರಕ್ಕೆ ತಾಯಿ ಹಾಗೂ ಮಗನ ನಡುವೆ ದಿನಾ ಗಲಾಟೆ ಆಗುತ್ತಿತ್ತು. ಆದರೆ ನಿನ್ನೆ ಗಲಾಟೆ ವಿಪರೀತ ಆಗಿದೆ. ತನ್ನ ಜೊತೆ ಜಗಳ ಮಾಡಿ ರಸ್ತೆ ಮೇಲೆ ಹೋಗುತ್ತಿದ್ದ ತಾಯಿ ಮೇಲೆ ಅಟ್ಯಾಕ್ ಮಾಡಿದ್ದಾನೆ ಮಗ. ಆಕೆಯ ಹಿಂದಿನಿಂದ ಜೀಪ್ ಹರಿಸಿ ನಡು ಬೀದಿಯಲ್ಲೇ ಕೊಂದಿದ್ದಾನೆ.

ಹೇಮರಾಜ್ ತಾಯಿ ನಾಗಮ್ಮನ ಹೆಸರಿನಲ್ಲಿ ಸಂಘದಿಂದ ಸುಮಾರು‌ 70,000 ಸಾಲ ಪಡೆದು ತೂಫಾನ್ ವಾಹನವನ್ನು ತೆಗೆದುಕೊಂಡಿದ್ದ. ಸಾಲದ ಕಂತು ವಾಪಾಸು ಕಟ್ಟದಿದ್ದಾಗ ಸಂಘದ ಇತರ ಸದಸ್ಯರು ನಾಗಮ್ಮಳನ್ನು ಒತ್ತಾಯ ಮಾಡಿದ್ದಾರೆ. ಇದರಿಂದ ನಾಗಮ್ಮ ಮಗ ಹೇಮರಾಜ್ ನಿಗೆ ಸಾಲ ವಾಪಸ್ ಕಟ್ಟುವಂತೆ ಹೇಳಿದಾಗ ವಾಗ್ವಾದ ನಡೆದು ಗಲಾಟೆ ಜೋರಾಗಿದೆ. ಕೊನೆಗೆ ತಾಯಿಯನ್ನು ಹತ್ಯೆ ಮಾಡುವಲ್ಲಿಗೆ ಹೋಗಿ ಮುಟ್ಟಿದೆ.

ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೇಮರಾಜ್ ನನ್ನು ಬಂಧಿಸಿದ್ದಾರೆ.